ರಾಣೆಬೆನ್ನೂರು:ಕೊರೊನಾ ಭಯದ ನಡುವೆ ಇಂದು ಎಸ್ಎಸ್ಎಲ್ ಸಿಯ ಇಂಗ್ಲೀಷ್ ಪರೀಕ್ಷೆ ನಡೆಯಿತು.
ಕೊರೊನಾ ಭಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ... ರಾಣೆಬೆನ್ನೂರಲ್ಲಿ 184 ವಿದ್ಯಾರ್ಥಿಗಳು ಗೈರು
ಇಂದು ನಡೆಸ ಎಸ್ಎಸ್ಎಲ್ ಸಿ ಇಂಗ್ಲೀಷ್ ಪರೀಕ್ಷೆಗೆ ರಾಣೆಬೆನ್ನೂರಿನಲ್ಲಿ 184 ವಿದ್ಯಾರ್ಥಿಗಳು ಗೈರಾಗಿದ್ದರು.
Ranebennuru
ನಗರ ಸೇರಿ ಗ್ರಾಮಾಂತರ ಪ್ರದೇಶಗಳಲ್ಲಿ 15 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಒಟ್ಟು 4466 ವಿದ್ಯಾರ್ಥಿಗಳಲ್ಲಿ 4282 ವಿದ್ಯಾರ್ಥಿಗಳು ಇಂದು ಇಂಗ್ಲೀಷ್ ಪರೀಕ್ಷೆಯನ್ನು ಬರೆದಿದ್ದು, 184 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು.
ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಶಿಕ್ಷಕರ ತಂಡ ಸ್ಯಾನಿಟೈಸರ್ ಹಾಕಿ, ಮಾಸ್ಕ್ ವಿತರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಿದರು. ವಿದ್ಯಾರ್ಥಿಗಳು ಸಹ ಅಂತರ ಕಾಯ್ದುಕೊಂಡು ನಿರಾಂತಕವಾಗಿ ಪರೀಕ್ಷೆ ಬರೆದಿದ್ದಾರೆ.