ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿಂದು 15 ಕೊರೊನಾ ಪ್ರಕರಣ ದೃಢ - Haveri Corona Death

ರಾಜ್ಯದಲ್ಲಿ ಇಂದೂ ಸಹ ಕೊರೊನಾ ಆರ್ಭಟ ಮುಂದುವರಿದಿದೆ. ಇನ್ನೂ ಹಾವೇರಿಯಲ್ಲೂ 15 ಹೊಸ ಪ್ರಕರಣ ದಾಖಲಾಗಿದೆ. ಅಲ್ಲದೆ ಈ ನಡುವೆ ನಾಲ್ವರಿಗ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

15 new corona positive cases reported in Haveri today
ಹಾವೇರಿಯಲ್ಲಿಂದು 15 ಕೊರೊನಾ ಪ್ರಕರಣ ದೃಢ

By

Published : Jul 18, 2020, 9:44 PM IST

ಹಾವೇರಿ:ಜಿಲ್ಲೆಯಲ್ಲಿ ಇಂದು 15 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಈ ಕುರಿತಂತೆ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೋಂಕಿತರ ಸಂಖ್ಯೆ 400ರ ಗಡಿದಾಟಿ 405ಕ್ಕೆ ಏರಿಕೆಯಾಗಿದೆ.

ಹಾವೇರಿಯಲ್ಲಿಂದು 15 ಕೊರೊನಾ ಪ್ರಕರಣ ದೃಢ

ಅದರಲ್ಲಿ ಈವರೆಗೆ 288 ಜನರು ಗುಣಮುಖರಾಗಿ ಮನೆಗೆ ತೆರಳಿದ್ದು 108 ಜನರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಇಂದು ಹಾವೇರಿಯ 04, ಸವಣೂರು, ರಾಣೆಬೆನ್ನೂರು, ಹಾನಗಲ್ ತಾಲೂಕುಗಳಲ್ಲಿ ತಲಾ ಮೂರು ಪ್ರಕರಣಗಳು ವರದಿಯಾಗಿದ್ದು, ಶಿಗ್ಗಾವಿಯಲ್ಲಿ ಎರಡು ಪ್ರಕರಣಗಳು ದೃಢಪಟ್ಟಿವೆ. ಕೊರೊನಾ ಪೀಡಿತರಲ್ಲಿ ನಾಲ್ಕು ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details