ಹಾವೇರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 1462ನೇ ಮದ್ಯವರ್ಜನ ಶಿಬಿರ ಹಾವೇರಿಯ ದೇವಗಿರಿಯಲ್ಲಿ ನಡೆಯಿತು. ಕೊನೆಯ ದಿನವಾದ ಇಂದು ಸಮಾರೋಪ ಸಮಾರಂಭ ಜರುಗಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಹಾವೇರಿ ಹುಕ್ಕೇರಿಮಠ ಸದಾಶಿವಶ್ರೀ ಗಳುವಹಿಸಿದ್ದರು.
ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಹುಕ್ಕೇರಿಮಠ ಶ್ರೀ ಹೇಳಿದ ಕಿವಿ ಮಾತಿದು!
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 1462 ನೇ ಮದ್ಯವರ್ಜನ ಶಿಬಿರದ ಕೊನೆಯ ದಿನವಾದ ಇಂದು ಸಮಾರೋಪ ಸಭಾರಂಭ ಕಾರ್ಯಕ್ರಮದ ಸಾನಿಧ್ಯವನ್ನು ಹಾವೇರಿ ಹುಕ್ಕೇರಿಮಠ ಸದಾಶಿವಶ್ರೀಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಮನುಷ್ಯ ಯಾವುದಾದರೂ ಒಂದು ಕೆಟ್ಟ ಚಟಕ್ಕೆ ಅಂಟಿಕೊಂಡರೆ ಸಾಕು ಚಟಗಳ ಸರಣಿಯ ಆರಂಭವಾಗುತ್ತೆ. ಗುಟ್ಕಾ,ತಂಬಾಕು, ಜೂಜು, ಮದ್ಯಪಾನ ಚಟಗಳು ಶುರುವಾಗುತ್ತವೆ. ಅಂತರದಲ್ಲಿ ಮದ್ಯಪಾನಿಗಳನ್ನ ಮದ್ಯದಿಂದ ಬಿಡಿಸುವ ಶ್ರೇಷ್ಠವಾದ ಕಾರ್ಯವನ್ನ ಶ್ರೀಕ್ಷೇತ್ರ ಧರ್ಮಸ್ಥಳ ಮಾಡಿಕೊಂಡು ಬಂದಿದೆ. ಅದರಂತೆ ಲಕ್ಷಾಂತರ ಜನ ಮದ್ಯಸೇವನೆ ಬಿಟ್ಟಿದ್ದಾರೆ. ತಾವು ಸಹ ಮದ್ಯಪಾನ ಬಿಡುವ ಸಂಕಲ್ಪ ಮಾಡಬೇಕು. ಮದ್ಯವರ್ಜನೆ ಮಾಡುವ ಮೂಲಕ ಇಂತಹ ಶಿಬಿರಗಳಿಗೆ ಹೆಚ್ಚು ಅರ್ಥ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮದ್ಯಪಾನ ವರ್ಜನೆ ಮಾಡಿದ ನೂರಾರು ಜನರು ಉಪಸ್ಥಿತರಿದ್ದರು.