ಹಾವೇರಿ: ಗೋಲಿಬಾರ್ ನಡೆದು ಶುಕ್ರವಾರಕ್ಕೆ 14 ವರ್ಷ. 10-06-2008 ರಂದು ಗೊಬ್ಬರ ಮತ್ತು ಬಿತ್ತನೆ ಬೀಜ ಕೇಳಲು ಬಂದಿದ್ದ ರೈತರ ಪ್ರತಿಭಟನೆ ಹಾದಿ ಹಿಡಿದಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಗೋಲಿಬಾರ್ ನಡೆಸಿದರು. ಗೋಲಿಬಾರ್‌ನಲ್ಲಿ ರೈತರಾದ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಹುತಾತ್ಮರಾಗಿದ್ದರು.
ಸಿದ್ದಲಿಂಗಪ್ಪ ಚೂರಿ ಗೋಲಿಬಾರ್‌ನಲ್ಲಿ ಸಾವನ್ನಪ್ಪಿದ್ದರೆ, ಪುಟ್ಟಪ್ಪ ಹೊನ್ನತ್ತಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಈ ಹಿನ್ನೆಲೆ ಹಾವೇರಿಯಲ್ಲಿ ಪ್ರತಿವರ್ಷ ವಿವಿಧ ರೈತ ಸಂಘಟನೆಗಳು ರೈತ ಹುತಾತ್ಮ ದಿನಾಚರಣೆ ಆಚರಿಸುತ್ತಾ ಬಂದಿವೆ. ಶುಕ್ರವಾರ ಸಹ ವಿವಿಧ ರೈತ ಸಂಘಟನೆಗಳು ರೈತ ಹುತಾತ್ಮ ದಿನಾಚರಣೆ ಆಚರಿಸಿದವು.
ಅಂದು ಗೋಲಿಬಾರ್ ನಡೆದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಇರುವ ರೈತರ ಹುತಾತ್ಮ ವೀರಗಲ್ಲಿಗೆ ರೈತ ಮುಖಂಡರು ಮಾಲಾರ್ಪಣೆ ಸಲ್ಲಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹುತಾತ್ಮ ರೈತರ ಪರ ಜಯಘೋಷ ಹಾಕಿದರು. ನಂತರ ಹುತಾತ್ಮ ರೈತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚಾರಣೆ ಸಲ್ಲಿಸಿದರು.
ರೈತ ಹುತಾತ್ಮ ದಿನ ಆಚರಿಸಿದ ರೈತರು ಓದಿ:CAA ಪ್ರತಿಭಟನೆ ವೇಳೆ ಮಂಗಳೂರಲ್ಲಿ ಗೋಲಿಬಾರ್ ಕೇಸ್: ಪೊಲೀಸರ ತಪ್ಪಿಲ್ಲ ಎಂದ ಸರ್ಕಾರ
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು ಸರ್ಕಾರಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಂದು ರೈತರು ಬಿತ್ತನೆ ಬೀಜ ಗೊಬ್ಬರವಿಲ್ಲದೇ ಪ್ರತಿಭಟನೆ ನಡೆಸಿದ್ದರು. ಘಟನೆಯಾಗಿ 14 ವರ್ಷವಾದರೂ ಜಿಲ್ಲೆಯ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಆರೋಪಿಸಿದರು.
ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾವೇರಿ ಜಿಲ್ಲೆಯನ್ನ ಪ್ರತಿನಿಧಿಸುತ್ತಾರೆ. ಆದರೆ, ಜಿಲ್ಲೆಯಲ್ಲಿ ರೈತರ ಸಮಸ್ಯೆಗಳನ್ನ ಕೇಳುವವರೇ ಇಲ್ಲದಂತಾಗಿದೆ ಎಂದು ರೈತರು ಆರೋಪಿಸಿದರು. ಜಿಲ್ಲೆಯಲ್ಲಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆಳೆವಿಮೆ, ಬೆಳೆಹಾನಿ ಪರಿಹಾರ, ಬೆಂಬಲ ಬೆಲೆ ಮತ್ತು ಯುಟಿಪಿ ಸಮಸ್ಯೆಗಳಿಂದ ರೈತರು ನರಳುತ್ತಿದ್ದಾರೆ.
ಇದಲ್ಲದರ ನಡುವೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ರೈತ ವಿರೋಧಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯುವಂತೆ ರೈತರು ಆಗ್ರಹಿಸಿದರು. ರೈತರ ನೆರವಿಗೆ ಬರದ ಸರ್ಕಾರಗಳ ವಿರುದ್ದ ರೈತರು ತಕ್ಕಪಾಠ ಕಲಿಸಲಿದ್ದಾರೆ ಎಂಬುವ ಎಚ್ಚರಿಕೆ ನೀಡಿದರು.