ಹಾವೇರಿ: 14 ವರ್ಷದ ಬಾಲಕನೊಬ್ಬ ಕಳೆದ ಮೂರು ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾನೆ.
ಬಾಲಕನ ಹೆಸರು ಪ್ರದೀಪ ವೀರಭದ್ರಪ್ಪ ಕಮ್ಮಾರ್. ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ಈತ ಯಾರ ಬಳಿಯೂ ಮೂರ್ತಿ ತಯಾರಿಕೆ ಕಲೆ ಕಲಿತಿಲ್ಲ. ಗಣೇಶ ಮೂರ್ತಿಗಳನ್ನು ಮಾಡುವುದನ್ನು ನೋಡಿ ತಾನೇ ಕಲಿತಿದ್ದಾನೆ.
14 ವರ್ಷದ ಬಾಲಕನ ಕೈಯಲ್ಲಿ ಅರಳಿದ ಗಣಪ ಕಳೆದ ಮೂರು ವರ್ಷಗಳಿಂದ ಗಣೇಶ ಮೂರ್ತಿ ತಯಾರಿಸುತ್ತಿರುವ ಪ್ರದೀಪ್ ಐದನೇ ತರಗತಿಯಲ್ಲಿದ್ದಾಗ 8, ಆರನೇ ತರಗತಿಯಲ್ಲಿದ್ದಾಗ 10 ಮತ್ತು ಈ ವರ್ಷ 21 ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾನೆ.
ಆದ್ರೆ ಈ ವರ್ಷ ಪ್ರದೀಪ್ ವಿಭಿನ್ನ ಶೈಲಿಯ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾನೆ. ಗಣೇಶ ಮೂರ್ತಿ ತಯಾರಿಕೆ ಹಲವು ಕಲಾವಿದರಿಗೆ ಉದ್ಯೋಗ ಒದಗಿಸಿದೆ. ಆದರೆ ಪ್ರದೀಪ್ ಮಾತ್ರ ವಿನಾಯಕನ ತಯಾರಿಕೆಯನ್ನ ಉದ್ಯೋಗ ಎಂದು ಭಾವಿಸಿಲ್ಲಾ. ಬದಲಿಗೆ ಭಕ್ತಿ ಸಮರ್ಪಣೆ ಮಾಡಲು ಇರುವ ಮಾರ್ಗವಾಗಿ ಸ್ವೀಕರಿಸಿದ್ದಾರೆ.