ರಾಣೆಬೆನ್ನೂರು(ಹಾವೇರಿ):ಕ್ಷೇತ್ರದ ಉಪಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಒಟ್ಟು 14 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
ರಾಣೆಬೆನ್ನೂರು ಉಪಸಮರಕ್ಕೆ14 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ.. - ranebennuru by election candidates nomination news
ರಾಣೆಬೆನ್ನೂರು ಕ್ಷೇತ್ರ ಉಪಚುನಾವಣೆಗೆ ಒಟ್ಟು 14 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
ಕೆ ಬಿ ಕೋಳಿವಾಡ(ಕಾಂಗ್ರೆಸ್),ಅರುಣಕುಮಾರ ಪೂಜಾರ(ಬಿಜೆಪಿ), ಮಲ್ಲಿಕಾರ್ಜುನ ಹಲಗೇರಿ(ಜೆಡಿಎಸ್), ಹನುಮಂತ ಕಬ್ಬಾರ(ಪಕ್ಷೇತರ), ಹನುಮಂತ ಚನ್ನಗೌಡ್ರ(ಪಕ್ಷೇತರ) ಅಶೋಕ ನಾಯ್ಕ್(ಕಾಂಗ್ರೆಸ್ ಬಂಡಾಯ), ಪವನಕುಮಾರ ಎಂ, ಎಸ್(ಪಕ್ಷೇತರ), ಶಿವಯೋಗಿ ಸ್ವಾಮಿ ಮಹಾನುಭವಿಮಠ(ಪಕ್ಷೇತರ), ಮೌಲಸಾಬ ಜಮಾಲಸಾಬ ಹಿತ್ತಲಮನಿ(ಪಕ್ಷೇತರ), ಜಗದೀಶ್ ಎಲಿಗಾರ(ಪಕ್ಷೇತರ),ಈಶ್ವರ ಹನುಮಂತಗೌಡ್ರ(ಪಕ್ಷೇತರ), ನಾಗಪ್ಪ ನೀಲಪ್ಪ ಸಂಸಿ(ಕೆಜೆಪಿ), ಗೌತಮ್ ಕಂಬಳಿ(ಯುವ ಕರ್ನಾಟಕ ಪಕ್ಷ), ಡಾ.ಜಿ ಎಂ ಕಲ್ಲೇಶ್ವರ(ಪಕ್ಷೇತರ) ಈ ಎಲ್ಲಾ ಅಭ್ಯರ್ಥಿಗಳು ಸೇರಿ ಉಪಚುನಾವಣೆಗೆ ಒಟ್ಟು 14 ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ನ.19 ರಂದು ನಾಮಪತ್ರಗಳ ಪರಿಶೀಲನೆ ನ.21 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದು,ಇವರಲ್ಲಿ ಯಾರು ಹಿಂದಕ್ಕೆ ಸರಿಯುತ್ತಾರೆ, ಯಾರು ಉಳಿಯುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.