ಹಾವೇರಿ: ಜಿಲ್ಲೆಯಲ್ಲಿ ಇಂದು 139 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈವರೆಗೆ ಜಿಲ್ಲೆಯಲ್ಲಿ 2292ಕ್ಕೇರಿಕೆಯಾಗಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಇಂದು ಹಾವೇರಿಯಲ್ಲಿ 139 ಜನರಿಗೆ ಕೊರೊನಾ: ಮೂವರ ಸಾವು - corona cases in haveri
ಹಾವೇರಿ ಜಿಲ್ಲೆಯಲ್ಲಿ ಇಂದು 139 ಸೋಂಕಿತರು ಪತ್ತೆಯಾಗಿದ್ದು, ಮೂವರು ಸಾವನಪ್ಪಿದ್ದಾರೆ ಎಂದು ಜಿಲ್ಲಾಡಳಿತ ವಿವರಣೆ ನೀಡಿದೆ.
ಜಿಲ್ಲೆಯಲ್ಲಿ ಇಂದು 139 ಸೋಂಕಿತರು ಪತ್ತೆ
ಹಾವೇರಿ ತಾಲೂಕು 38, ರಾಣೆಬೆನ್ನೂರು ತಾಲೂಕು 34, ಶಿಗ್ಗಾವಿ ತಾಲೂಕು 29, ಹಿರೇಕೆರೂರು ತಾಲೂಕು 13, ಬ್ಯಾಡಗಿ ತಾಲೂಕು 12, ಸವಣೂರು ತಾಲೂಕು 7, ಹಾನಗಲ್ ತಾಲೂಕಿನಲ್ಲಿ 6 ಪ್ರಕರಣಗಳು ದೃಢಪಟ್ಟಿವೆ. ಇನ್ನೂ ಇಂದು 25 ಜನ ಗುಣಮುಖರಾಗಿದ್ದಾರೆ.
ಇಂದು 3 ಸೋಂಕಿತರು ಮೃತಪಟ್ಟಿದ್ದು, ಇದರಿಂದ ಸಾವಿನ ಸಂಖ್ಯೆ 49ಕ್ಕೇರಿಕೆಯಾಗಿದೆ. ಇದುವರೆಗೂ 352 ಜನರು ಹೋಂ ಐಸೋಲೇಷನ್‌ನಲ್ಲಿದ್ದಾರೆ. 392 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.