ಹಾವೇರಿ:ಜಿಲ್ಲೆಯಲ್ಲಿ ಬುಧವಾರ 132 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣನವರ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2057 ಕ್ಕೆ ಏರಿದಂತಾಗಿದೆ ಎಂದರು.
ಹಾವೇರಿ ಜಿಲ್ಲೆ; 132 ಜನರಿಗೆ ಕೊರೊನಾ ಸೋಂಕು ದೃಢ - Corona case in Haveri
ಹಾವೇರಿ ಜಿಲ್ಲೆಯಲ್ಲಿ ಇಂದು 132 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಒಂದು ಸಾವಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣನವರ್ ತಿಳಿಸಿದರು.
ಕೊರೊನಾದಿಂದ ಗುಣಮುಖರಾಗಿ 42 ಜನ ಮನೆಗೆ ತೆರಳಿದ್ದಾರೆ. ಹಾವೇರಿ ತಾಲೂಕಿನಲ್ಲಿ 38, ರಾಣೆಬೆನ್ನೂರು ತಾಲೂಕಿನಲ್ಲಿ 30, ಬ್ಯಾಡಗಿ ತಾಲೂಕಿನಲ್ಲಿ 23 ಪ್ರಕರಣಗಳು ದೃಢಪಟ್ಟಿವೆ. ಹಿರೇಕೆರೂರು ತಾಲೂಕಿನಲ್ಲಿ 19, ಹಾನಗಲ್ ತಾಲೂಕಿನಲ್ಲಿ 13, ಶಿಗ್ಗಾವಿ ತಾಲೂಕಿನಲ್ಲಿ 08 ಮತ್ತು ಸವಣೂರು ತಾಲೂಕಿನಲ್ಲಿ 01 ಪ್ರಕರಣಗಳು ಪತ್ತೆಯಾಗಿವೆ. ಒಂದು ಸಾವಾಗಿದ್ದು ಇಲ್ಲಿಯವರೆಗೆ ಒಟ್ಟು 43 ಜನ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ 258 ಜನರು ಹೋಂ ಐಸೋಲೇಷನ್ನಲ್ಲಿದ್ದರೆ ವಿವಿಧ ಆಸ್ಪತ್ರೆಗಳಲ್ಲಿ 477 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 1279 ಜನರು ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣನವರ್ ತಿಳಿಸಿದರು.