ಹಾವೇರಿ: ಜಿಲ್ಲೆಯಲ್ಲಿ ಗುರುವಾರ 119 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಕುರಿತಂತೆ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,913ಕ್ಕೆ ಏರಿದೆ.
ಹಾವೇರಿಯಲ್ಲಿಂದು 119 ಹೊಸ ಕೊರೊನಾ ಕೇಸ್ ಪತ್ತೆ: 109 ಮಂದಿ ಡಿಸ್ಚಾರ್ಜ್ - ಹಾವೇರಿಯಲ್ಲಿ 119 ಕೊರೊನಾ ಪ್ರಕರಣಗಳು ಪತ್ತೆ ಸುದ್ದಿ,
ಹಾವೇರಿಯಲ್ಲಿಂದು 119 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 109 ಜನ ಕೋವಿಡ್ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಗುರುವಾರ 109 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 09, ಹಾನಗಲ್ ತಾಲೂಕಿನಲ್ಲಿ 11, ಹಾವೇರಿ ತಾಲೂಕಿನಲ್ಲಿ 34, ಹಿರೇಕೆರೂರು ತಾಲೂಕಿನಲ್ಲಿ 05, ರಾಣೆಬೆನ್ನೂರು ತಾಲೂಕಿನಲ್ಲಿ 46, ಸವಣೂರು ಮತ್ತು ಶಿಗ್ಗಾವಿಯಲ್ಲಿ ತಲಾ 07 ಜನರಿಗೆ ಕೊರೊನಾ ವಕ್ಕರಿಸಿದೆ.
ಜಿಲ್ಲಾಡಳಿತ ಐವರು ಸಾವನ್ನಪ್ಪಿರುವ ಬಗ್ಗೆ ದೃಢೀಕರಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ92 ಕ್ಕೇರಿದಂತಾಗಿದೆ. 856 ಜನ ಹೋಂ ಐಸೋಲೇಷನ್‌ನಲ್ಲಿ ಮತ್ತು 458 ಸೋಂಕಿತರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.