ಹಾವೇರಿ: ಜಿಲ್ಲೆಯಾದ್ಯಂತ ಇಂದು 111 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 9548ಕ್ಕೆ ಏರಿಕೆಯಾಗಿದೆ.
ಹಾವೇರಿಯಲ್ಲಿಂದು 111 ಕೊರೊನಾ ಪಾಸಿಟಿವ್ ಪ್ರಕರಣ: ಸೋಂಕಿತರ ಸಂಖ್ಯೆ 9548ಕ್ಕೆ ಏರಿಕೆ - Corona in Haveri
ಹಾವೇರಿ ಜಿಲ್ಲೆಯಲ್ಲಿ ಇಂದು ನೂತನವಾಗಿ 111 ಕೊರೊನಾ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ 9548ಕ್ಕೆ ಏರಿದೆ. ಇಂದು 53 ಜನ ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ.
ಸಂಗ್ರ ಚಿತ್ರ
ಬ್ಯಾಡಗಿ ತಾಲೂಕಿನಲ್ಲಿ 04, ಹಾನಗಲ್ 10, ಹಾವೇರಿ 59, ಹಿರೇಕೆರೂರು 08, ರಾಣೆಬೆನ್ನೂರು 23, ಶಿಗ್ಗಾವಿ 06 ಹಾಗೂ ಸವಣೂರು ತಾಲೂಕಿನಲ್ಲಿ ಒಬ್ಬರಿಗೆ ಇಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 53 ಮಂದಿ ಕೋವಿಡ್ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಜಿಲ್ಲೆಯಲ್ಲಿ 740 ಮಂದಿ ಹೋಂ ಐಸೋಲೇಶನ್ನಲ್ಲಿದ್ದು, ಇನ್ನುಳಿದಂತೆ 122 ಸೋಂಕಿತರಿಗೆ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.