ಕರ್ನಾಟಕ

karnataka

ETV Bharat / state

ಗಣಪತಿ ವಿಸರ್ಜನೆ ವೇಳೆ ಫುಲ್ ಡ್ಯಾನ್ಸ್: ಪೊಲೀಸರನ್ನೇ ಎಳೆದಾಡಿದ ಯುವಕರು - ganesh fest in hassan '

ಒಂದು ಕಡೆ ಪಿಎಸ್‍ಐ ಡೋಲು ಬಡಿಯುತ್ತಾ ಕುಣಿಯುವುದನ್ನು ನಿಲ್ಲಿಸಿ ಎಂದು ಮನವಿ ಮಾಡುತ್ತಿದ್ದರೆ, ಮತ್ತೊಂದೆಡೆ ಡೋಲು ಬಡಿಯುವುದನ್ನು ನಿಲ್ಲಿಸದಂತೆ ಯುವಕರು ಆಗ್ರಹ ಮಾಡಿದ್ದಾರೆ. ಈ ವೇಳೆಯಲ್ಲಿ ಪಿಎಸ್‍ಐ ಹಾಗೂ ಯುವಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಯುವಕರು ಪೊಲೀಸರನ್ನೇ ತಳ್ಳಾಡಿದ್ದಾರೆ.

Youths who were treated badly with the police while Ganesh fest
ಪೊಲೀಸರನ್ನೇ ಎಳೆದಾಡಿದ ಯುವಕರು

By

Published : Sep 12, 2021, 2:15 AM IST

ಹಾಸನ: ಗಣೇಶ ವಿಸರ್ಜನೆ ವೇಳೆ ಯುವಕರ ಗುಂಪೊಂದು ಪೊಲೀಸರನ್ನೇ ಎಳೆದಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಕೊರೊನಾ ನಿಯಮ ಪಾಲಿಸಿ ಗಣೇಶನ ಮೆರವಣಿಗೆ ಮಾಡಲು ಯುವಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಗಣಪತಿ ವಿಸರ್ಜನೆ ವೇಳೆಯಲ್ಲಿ ಡೋಲು ಬಡಿಯುತ್ತಾ, ಕುಣಿಯುತ್ತಿದ್ದವರನ್ನು ಸಬ್​ ಇನ್​ಸ್ಪೆಕ್ಟರ್​ ತಡೆಯಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಯುವಕರು ಡೋಲು ಬಡಿಯುವುದನ್ನು ನಿಲ್ಲಿಸದಂತೆ ಕುಮ್ಮಕ್ಕು ನೀಡಿದ್ದಾರೆ.

ಪೊಲೀಸರನ್ನೇ ಎಳೆದಾಡಿದ ಯುವಕರು

ಒಂದು ಕಡೆ ಪಿಎಸ್‍ಐ ಡೋಲು ಬಡಿಯುತ್ತಾ ಕುಣಿಯುವುದನ್ನು ನಿಲ್ಲಿಸಿ ಎಂದು ಮನವಿ ಮಾಡುತ್ತಿದ್ದರೆ, ಮತ್ತೊಂದೆಡೆ ಡೋಲು ಬಡಿಯುವುದನ್ನು ನಿಲ್ಲಿಸದಂತೆ ಯುವಕರು ಆಗ್ರಹ ಮಾಡಿದ್ದಾರೆ. ಈ ವೇಳೆಯಲ್ಲಿ ಪಿಎಸ್‍ಐ ಹಾಗೂ ಯುವಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಯುವಕರು ಪೊಲೀಸರನ್ನೇ ತಳ್ಳಾಡಿದ್ದಾರೆ.

ಪೊಲೀಸರ ಅಸಹಾಯಕತೆ ಸ್ಥಳೀಯರೊಬ್ಬರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಈ ವಿಚಾರವಾಗಿ ಈವರೆಗೂ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ABOUT THE AUTHOR

...view details