ಕರ್ನಾಟಕ

karnataka

ETV Bharat / state

ಕಾಲಿಗೆ ಹಾಕುವ ಚಪ್ಪಲಿಗೆ ಗ್ಯಾರೆಂಟಿ ಕೇಳ್ತೇವೆ, ನಿಮ್ಮ ಲಸಿಕೆಗೆ ಖಾತ್ರಿ ಕೊಟ್ರಷ್ಟೇ ಹಾಕಿಸಿಕೊಳ್ಳುವೆ.. - ಹಾಸನದಲ್ಲಿ ಲಸಿಕೆ ಪಡೆಯಲು ಯುವಕ ನಿರಾಕರಣೆ

ಈ ವೇಳೆ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಯುವಕ ಲಸಿಕೆ ಹಾಕಿಸಿಕೊಂಡಿಲ್ಲ. ಯುವಕನ ಜೊತೆ ಗ್ರಾಮದ ಮತ್ತಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ..

Youth refused take vaccine in Hassan
ಹಾಸನದಲ್ಲಿ ಲಸಿಕೆ ಪಡೆಯಲು ಯುವಕ ನಿರಾಕರಣೆ

By

Published : Sep 17, 2021, 7:39 PM IST

ಹಾಸನ :ಲಸಿಕೆ ಬಗ್ಗೆ ಗ್ಯಾರೆಂಟಿ ಕೊಟ್ರೆ ಹಾಕಿಸಿಕೊಳ್ಳುವುದಾಗಿ ಯುವಕನೋರ್ವ ವ್ಯಾಕ್ಸಿನ್​ ಪಡೆಯಲು ನಿರಾಕರಿಸಿದ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿರಾಜನಪಟ್ಟಣ ಗ್ರಾಮದಲ್ಲಿ ನಡೆದಿದೆ.

ಹಾಸನದಲ್ಲಿ ಲಸಿಕೆ ಪಡೆಯಲು ಯುವಕ ನಿರಾಕರಣೆ

ಹಾಸನದಲ್ಲಿ ಸುಮಾರು 80 ಸಾವಿರ ಲಸಿಕೆ ಹಾಕುವ ಸಲುವಾಗಿ ಲಸಿಕಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ, ಅಧಿಕಾರಿಗಳು ಮನೆ-ಮನೆಗೆ ತೆರಳಿ ಜನರಿಗೆ ಲಸಿಕೆ ಪಡೆಯುವಂತೆ ಮನವಿ ಮಾಡುತ್ತಿದ್ದರು. ಈ ವೇಳೆ ಪ್ರವೀಣ್ ಎಂಬ ಯುವಕ ವ್ಯಾಕ್ಸಿನ್​ ಹಾಕಿಸಿಕೊಳ್ಳಲು ನಿರಾಕರಿಸಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾನೆ.

ಲಸಿಕೆ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು

ಕಾಲಿಗೆ ಹಾಕೋ ಚಪ್ಪಲಿಗೆ ಗ್ಯಾರೆಂಟಿ ಕೇಳುತ್ತೇವೆ, ಅಂತಹದ್ರಲ್ಲಿ ದೇಹಕ್ಕೆ ಪಡೆಯುವ ಲಸಿಕೆಗೆ ಖಾತ್ರಿ ಬೇಡ್ವಾ, ನೀವು ಲಸಿಕೆ ಬಗ್ಗೆ ರೈಟಿಂಗ್​​ನಲ್ಲಿ ಖಾತ್ರಿ ಮಾಡಿ ಬರೆದುಕೊಟ್ಟರೆ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತೇನೆ ಎಂದು ವಾದ ಮಾಡಿದನು.

ಈ ವೇಳೆ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಯುವಕ ಲಸಿಕೆ ಹಾಕಿಸಿಕೊಂಡಿಲ್ಲ. ಯುವಕನ ಜೊತೆ ಗ್ರಾಮದ ಮತ್ತಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

ABOUT THE AUTHOR

...view details