ಹಾಸನ :ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇಮಾವತಿ ನದಿಯಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ಪುನೀತ್ (24) ಮೃತ ಯುವಕ. ರಜೆ ಇದ್ದಿದ್ದರಿಂದ ಸಕಲೇಶಪುರದ ಅಗ್ರಹಾರ ಬಡಾವಣೆಯ ಸ್ನೇಹಿತ ಕುಮಾರ್ ಎಂಬುವರ ಮನೆಗೆ ಬಂದಿದ್ದ ಪುನೀತ್, ಮಂಗಳವಾರ ಮಧ್ಯಾಹ್ನ ಗೆಳೆಯರೊಂದಿಗೆ ಈಜಲು ತೆರಳಿದ್ದ.
ಸಾವಿನ ಸುತ್ತ ಅನುಮಾನದ ಹುತ್ತ.. ನಿದ್ದೆಗೆ ಜಾರಿ ನೀರಿನಲ್ಲಿಯೇ ಮೃತಪಟ್ನಾ ಯುವಕ? - Hemavati River
ಸದ್ಯ ನದಿಯಿಂದ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಸಕಲೇಶಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ..
ಮೃತ ಯುವಕ ಪುನೀತ್
ಈ ವೇಳೆ ಇದ್ದಕ್ಕಿದ್ದಂತೆ ಆತ ನಿದ್ದೆಗೆ ಜಾರಿ ನೀರಿನಲ್ಲಿಯೇ ಮೃತಪಟ್ಟಿದ್ದಾನೆ ಎಂದು ಸ್ನೇಹಿತರು ತಿಳಿಸಿದ್ದು, ಪುನೀತ್ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ. ಸದ್ಯ ನದಿಯಿಂದ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಸಕಲೇಶಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ :ಚಾಮರಾಜಪೇಟೆ ಪಿಎಸ್ಐ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ: ಸಿಐಡಿ ತನಿಖೆಗೆ ಹೈಕೋರ್ಟ್ ಆದೇಶ