ಹಾಸನ:ಯುವಕನ ಎದೆಗೆ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣದ ಗದ್ದೆಹಳ್ಳದ ಬಳಿ ನಡೆದಿದೆ.
ಸಂಪತ್ ಮೃತ (30) ಮೃತ ದುರ್ದೈವಿ. ಬೆಂಗಳೂರು ಹಾಸನ ಹೆದ್ದಾರಿ ಪಕ್ಕದಲ್ಲೇ ಈ ಕೊಲೆ ನಡೆದಿದೆ. ಮೃತ ಸಂಪತ್ ಮತ್ತು ಹರೀಶ್ ಎಂಬಾತನ ನಡುವೆ ಕ್ಷುಲ್ಲಕ ಕಾರಣಕ್ಕ ಜಗಳ ನಡೆದು, ಹರೀಶ್ ಸಂಪತ್‌ನ ಎದೆಗೆ ಚಾಕು ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಚನ್ನರಾಯಪಟ್ಟಣದಲ್ಲಿ ಪಾರಿವಾಳ ವಿಚಾರಕ್ಕೆ ನಡೆದ ಇಬ್ಬರ ನಡುವಿನ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ!
ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ನಿನ್ನೆಯಷ್ಟೇ ಹಣದ ವಿಷಯದಲ್ಲಿ ಜಗಳ ನಡೆದು 25 ವರ್ಷದ ಯುವಕನ ಕೊಲೆ ನಡೆದಿತ್ತು. ಇಂದು ಮತ್ತೊಂದು ಕೊಲೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಪೊಲೀಸರು ಶೀಘ್ರವೇ ಕೊಲೆ ಆರೋಪಿಗಳನ್ನು ಬಂಧಿಸಿ, ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.