ಕರ್ನಾಟಕ

karnataka

ETV Bharat / state

ಅನುಮತಿ ಇಲ್ಲದೆ ಹಾಸನ ಜಿಲ್ಲೆಗೆ ಎಂಟ್ರಿ ಕೊಟ್ಟ ಯುವತಿಯರನ್ನು ತಡೆದ ಪೊಲೀಸರು - ಅನುಮತಿ ಇಲ್ಲದೆ ಸಕಲೇಶಪುರಕ್ಕೆ ಬಂದ ಯುವತಿಯರು

ಅನುಮತಿಯಿಲ್ಲದೇ ಮಂಗಳೂರಿನಿಂದ ಶಿರಾಡಿ ಘಾಟ್​ ಮೂಲಕ ಸಕಲೇಶಪುರಕ್ಕೆ ಬಂದ ಯುವತಿಯರನ್ನು ಪೊಲೀಸರು ತಡೆದು ಅವರ ಕಾರನ್ನು ಸೀಜ್​ ಮಾಡಿದ್ದಾರೆ.

police
ಪೊಲೀಸರು

By

Published : Apr 13, 2020, 5:53 PM IST

ಹಾಸನ:ಯಾವುದೇ ಅನುಮತಿ ಪಡೆಯದೇ ಮಂಗಳೂರಿನಿಂದ ಸಕಲೇಶಪುರಕ್ಕೆ ಕಾರಿನಲ್ಲಿ ಬಂದ ಯುವತಿಯರನ್ನು ಪೊಲೀಸರು ತಡೆದಿದ್ದಾರೆ.

ಕಾರಿಗೆ ಅಗತ್ಯ ಸೇವೆ ಪಾಸ್​ ಅಂಟಿಸಿಕೊಂಡು ಮಂಗಳೂರಿನಿಂದ ಶಿರಾಡಿ ಘಾಟ್​ ಮೂಲಕ ಸಕಲೇಶಪುರಕ್ಕೆ ಬಂದ ಯುವತಿಯರನ್ನು ಪೊಲೀಸರು ಖುದ್ದು ಪರಿಶೀಲಿಸಿದಾಗ ಅವರ ಬಳಿ ಅನುಮತಿ ಪಾಸ್​ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಅವರು ಸಕಲೇಶಪುರ ತಾಲೂಕಿನ ಆಚಂಗಿ ಗ್ರಾಮದವರೆಂದು ತಿಳಿಸಿದ್ದಾರೆ.

ಅನುಮತಿ ಇಲ್ಲದೇ ಬಂದವರನ್ನು ಪರಿಶೀಲಿಸಿದ ಪೊಲೀಸರು

ಅನಂತರ ಯುವತಿಯರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ 14 ದಿನ ಹೋಂ ಕ್ವಾರಂಟೈನ್​ನಲ್ಲಿರಲು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಯುವತಿಯರು ಬಂದಿದ್ದ ವಾಹನವನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಉಪ ವಿಭಾಗಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ಮಂಜುನಾಥ್, ಆರಕ್ಷಕ ವೃತ್ತ ನಿರೀಕ್ಷಕ‌ ಗಿರೀಶ್,, ಸಬ್ ಇನ್ಸ್​ಪೆಕ್ಟರ್​ ರಾಘವೇಂದ್ರ ಮತ್ತು ಕಾರ್ಮಿಕ ಇಲಾಖೆಯ ಅಕ್ಬರ್ ಬಾಷಾ ಇನ್ನಿತರರು ಇದ್ದರು.

ABOUT THE AUTHOR

...view details