ಸಕಲೇಶಪುರ(ಹಾಸನ): ಜನ್ಧನ್ ಖಾತೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣ ಪಡೆಯಲು ನೂಕುನುಗ್ಗಲು ಉಂಟಾದ ಘಟನೆ ಸಕಲೇಶಪುರದ ಕೆನರಾ ಬ್ಯಾಂಕ್ನಲ್ಲಿ ನಡೆದಿದೆ. ಕೊರೊನಾ ಹಿನ್ನೆಲೆ ಮಹಿಳೆಯರ ಜನ್ಧನ್ ಖಾತೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ.
ಜನ್ಧನ್ ಖಾತೆಯಿಂದ ಹಣ ಪಡೆಯಲು ಮಹಿಳೆಯರ ನೂಕುನುಗ್ಗಲು - ಹಾಸನ ಸುದ್ದಿ
ಲಾಕ್ಡೌನ್ ಹಿನ್ನೆಲೆ ದೇಶದ ನಾಗರಿಕರಿಗೆ ಪ್ರಧಾನಮಂತ್ರಿ ಜನ್ಧನ್ ಖಾತೆ ಮೂಲಕ ಹಣ ಜಮಾ ಮಾಡಲಾಗಿದೆ. ಈ ಹಿನ್ನೆಲೆ ಹಣ ಪಡೆಯಲು ಮಹಿಳೆಯರು ಬ್ಯಾಂಕ್ಗಳಿಗೆ ಮುಗಿಬಿದ್ದಿದ್ದಾರೆ.
ಜನ್ಧನ್ ಖಾತೆಯಿಂದ ಹಣ ತೆಗೆಯಲು ಮಹಿಳೆಯರ ನೂಕುನುಗ್ಗಲು
ಇದರಿಂದ ನಗರದ ಬಹುತೇಕ ಬ್ಯಾಂಕ್ಗಳ ಮುಂದೆ ಸರತಿ ಸಾಲು ಉಂಟಾಗಿದ್ದು, ಹಣ ಪಡೆಯಲು ನೂಕುನುಗ್ಗಲು ಏರ್ಪಟ್ಟಿತ್ತು. ಈ ಹಿನ್ನೆಲೆ ಬ್ಯಾಂಕ್‌ನ ವ್ಯವಸ್ಥಾಪಕ ಶಶಿಧರ್ ಆಗಮಿಸಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣ ಹಿಂತಿರುಗಿ ಹೋಗುವುದಿಲ್ಲ. ಆದು ನಿಮ್ಮ ಖಾತೆಯಲ್ಲೇ ಇರುತ್ತದೆ. ಅದನ್ನು ಇಷ್ಟೇ ದಿನಗಳಲ್ಲಿ ಪಡೆಯಬೇಕೆಂಬ ನಿಯಮವಿಲ್ಲ. ನಿಮಗೆ ಯಾವಾಗ ಸಾಧ್ಯವಾಗುತ್ತದೆಯೋ ಆಗ ನಿಮ್ಮ ಖಾತೆಯಿಂದ ಬಳಸಿಕೊಳ್ಳಬಹುದು. ದಯವಿಟ್ಟು ಜನ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮುಂದಾಗಬೇಕು ಅಂತ ಜನರಿಗೆ ತಿಳಿಹೇಳಿದರು.