ಹಾಸನ:ಮೊಟಾರ್ ರೇಸ್ ಅಂದ್ರೆ ಹಾಗೆ. ಅಲ್ಲಿ ಎದರೆ ನಡುಗಿಸೋ ಥ್ರಿಲ್ಲಿಂಗ್ ಇರುತ್ತೆ. ರೋಮಾಂಚನಕಾರಿ ಅನುಭವದ ಜತೆ ರೋಚಕತೆ ಇರುತ್ತೆ. ರಸ್ತೆಯಲ್ಲಿ ರಾಕೆಟ್ ಓಡಾಡಿದಂತೆ ಗುರಿಯತ್ತ ಮುನ್ನುಗ್ಗೋ ಕಾರುಗಳು, ಧೂಳೆಬ್ಬಿಸುತ್ತಾ ಮಿಂಚಿ ಮಾಯವಾಗೋ ಸವಾರರ ಚಾಣಾಕ್ಷತೆಯ ರೇಡಿಂಗ್ ನೋಡೋದು ಅಂದ್ರೆ ತುದಿಗಾಲಲ್ಲಿ ನಿಂತು ಆಟ ನೋಡಬೇಕೆನಿಸೋ ಕುತೂಹಲ ಇರುತ್ತೆ. ಹಾಸನದಲ್ಲಿ ನಡೆದ ಥ್ರಿಲ್ಲಿಂಗ್ ಕಾರ್ ರೇಸ್ನಲ್ಲಿ ಮಹಿಳೆಯರು ತಾವು ಪುರುಷರಗಿಂತಲೂ ಕಡಿಮೆ ಇಲ್ಲ ಎಂದು ಕಾರ್ ಓಡಿಸಿ ಕಮಾಲ್ ಮಾಡಿದ್ದಾರೆ.
ಹಾಸನದಲ್ಲಿ ಕಾರ್ ರೇಸ್, ಮಹಿಳೆಯರ ಅಬ್ಬರ ಮೊಟಾರ್ ರೇಸ್ ಅಂದ್ರೆ ಅಲ್ಲಿ ಪುರುಷ ಸ್ಪರ್ಧಿಗಳಿರುತ್ತಾರೆ. ಆದರೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ನಡೆದ ಮೊಟಾರ್ ರೇಸ್ನಲ್ಲಿ ಲೇಡಿ ರೇಡರ್ಸ್ಗಳದ್ದೇ ಅಬ್ಬರ. ಇಲ್ಲಿ ಮಹಿಳಾ ಸ್ಪರ್ಧಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ರು. ಕೊಡಗಿನ ಬೆಡಗಿಯರಾದ ಮೀನಾ ಹಾಗೂ ನಿರ್ಮಲಾ ಮತ್ತು ಸಕಲೇಶಫುರದ ಯುವ ರೇಡರ್ ಬೆಡಗಿ ಜಾಸ್ಮಿನ್ ನೋಡುಗರಿಗೆ ಸಖತ್ ರಂಜಿಸಿದ್ರು. ಇಲ್ಲಿನ ವಿಶಿಷ್ಟ ಟ್ರ್ಯಾಕ್ನಲ್ಲಿ ಕಾರ್ ಏರಿ ರೇಸ್ಗಿಳಿದ ಕೊಡಗಿನ ಮೀನಾ ಮಿಂಚಿನ ವೇಗದಲ್ಲಿ ಕಾರ್ ಚಲಾಯಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ರೆ ಮತ್ತೊಬ್ಬ ಸುಂದರಿ ರೇಡರ್ ನಿರ್ಮಲಾ ಕೂಡ ತಮ್ಮ ಚಾಣಾಕ್ಷತೆಯಿಂದ ಟ್ರ್ಯಾಕ್ನಲ್ಲಿ ರೇಸ್ಗಿಳಿದು ಕಮಾಲ್ ಮಾಡಿದ್ರು.
ಪುರುಷರಗಿಂತಲೂ ಲೇಡಿ ರೈಡರ್ಸ್ ಕಮಾಲ್ ಇವರಿಬ್ಬರಿಗಿಂತಲೂ ವೇಗವಾಗಿ ಟ್ರ್ಯಾಕ್ನಲ್ಲಿ ಕಾರ್ ಚಲಾಯಿಸಿ ತಾವು ಯಾರಿಗೂ ಕಡಿಮೆಯಿಲ್ಲ ಎನ್ನುವಂತೆ ಸ್ಪರ್ಧೆ ನೀಡಿದ ಜಾಸ್ಮಿನ್ ಗೆಲುವಿನ ನಗೆ ಬೀರಿದರು. ಸಾಮಾನ್ಯವಾಗಿ ರೇಸ್ಗೆ ಬಂದು ಖುಷಿಪಡ್ತಿದ್ದ ಮಹಿಳಾ ಮಣಿಗಳು ಇದೀಗ ಖುದ್ದಾಗಿ ರೇಸ್ಗೆ ಇಳಿದು ಗಮನ ಸೆಳೆದರು.
ಸಾಹಸಮಯ ಕ್ರೀಡೆಗಳಿಗೆ ಹೆಸರಾದ ಹಾಸನ ಜಿಲ್ಲೆಯಲ್ಲಿ ಮೋಟಾರ್ ಸ್ಪೋರ್ಟ್ಸ್ಗೆ ಉತ್ತೇಜನ ನೀಡುವ ಸಲುವಾಗಿ ಹಾಗೂ ಯುವ ರೇಸರ್ಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಲವು ಮೊಟಾರ್ ರೇಸ್ ಸ್ಪರ್ಧೆ ನಡೆಸಲಾಗುತ್ತದೆ.
ಹಾಸನದಲ್ಲಿ ನಡೆದ ಕಾರ್ ರೇಸ್ ಸಕಲೇಶಫುರದ ಮಲ್ನಾಡ್ ಬಾಯ್ಸ್ ಸಂಸ್ಥೆಯಿಂದ ಆಯೋಜನೆಗೊಂಡಿದ್ದ ಕಾರ್ ರೇಸ್ನಲ್ಲಿ ಮೊದಲಿಗೆ ಪುರುಷರ 800 ಸಿಸಿ, 100 ಸಿಸಿ, 1400 ಸಿಸಿ ಹಾಗು ನಾವೀಸ್ ಕ್ಲಾಸ್, ಓಪನ್ ಕ್ಲಾಸ್ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಟ್ರ್ಯಾಕ್ನಲ್ಲಿ ರೇಸರ್ಗಳು ಮಿಂಚಿನ ವೇಗದಲ್ಲಿ ಕಾರ್ ಚಲಾಯಿಸಿದ್ರು. ಕಣ್ಣು ಮಿಟಕಿಸಿ ಬಿಡುವಷ್ಟರಲ್ಲಿ ರಾಕೆಟ್ ವೇಗದಲ್ಲಿ ಮುನ್ನುಗ್ಗೋ ರೇಡರ್ಸ್ ಗೆಲುವಿಗಾಗಿ ನಡೆಸೋ ಪೈಪೋಟಿ ಎಲ್ಲರೂ ಕುತೂಹಲದಿಂದ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ರೇಸ್ ಪ್ರಿಯರು ಮಸ್ತ್ ಮಸ್ತ್ ಎಂಜಾಯ್ ಮಾಡಿದ್ರು. ಇದರಲ್ಲಿ 90ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು.