ಕರ್ನಾಟಕ

karnataka

ETV Bharat / state

ಮಕ್ಕಳಿದ್ದರೂ ಒಂಟಿ ಜೀವನ... ಆಸ್ತಿಗಾಗಿ ನಡೆಯಿತಾ ಮಹಿಳೆಯ ಕೊಲೆ? - Women murder in Hassan,

ಆಸ್ತಿ ಅಥವಾ ಹಣದ ವಿಚಾರಕ್ಕಾಗಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

Women murder, Women murder in Hassan, Hassan murder news, ಮಹಿಳೆ ಕೊಲೆ, ಹಾಸನದಲ್ಲಿ ಮಹಿಳೆ ಕೊಲೆ, ಹಾಸನ ಕೊಲೆ ಸುದ್ದಿ,
ಆಸ್ತಿಗಾಗಿ ನಡೀತು ಮಹಿಳೆಯ ಕೊಲೆ

By

Published : Jan 16, 2020, 4:27 PM IST

ಹಾಸನ:ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನ ಕೊಲೆ ಮಾಡಿರುವ ಘಟನೆ ದೊಡ್ಡಪುರ ಗೇಟ್​ ಬಳಿ ನಡೆದಿದೆ.

ಹೇಮಾವತಿ (50) ಕೊಲೆಯಾದ ಮಹಿಳೆ. ಎರಡು ದಿನಗಳಿಂದ ನಾಪತ್ತೆಯಾಗಿದ್ದ ಹೇಮಾವತಿ ಅವರ ಮೃತದೇಹ ದೊಡ್ಡಪುರ ರಸ್ತೆಯ ಬಳಿ ಪತ್ತೆಯಾಗಿದೆ. ಕುತ್ತಿಗೆಗೆ ಟವಲ್​ನಿಂದ ಬಿಗಿದು ಕೊಲೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಆಸ್ತಿಗಾಗಿ ನಡೀತು ಮಹಿಳೆಯ ಕೊಲೆ

ಸಾಂಸಾರಿಕ ಕಲಹ ಒಂದು ಕಡೆಯಾದರೆ, ಮತ್ತೊಂದು ಕಡೆ ಆಸ್ತಿ ವಿಚಾರದಿಂದ ಕೊಲೆ ಯಾಗಿರಬಹುದು ಎನ್ನಲಾಗುತ್ತಿದೆ. ಕಳೆದ 10 ವರ್ಷಗಳ ಹಿಂದೆ ಪತಿ ಮೃತರಾಗಿದ್ದರು. ಮಗ ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದಾರೆ. ಮತ್ತೊಬ್ಬ ಮಗಳು ಬೆಳಗಾಂನಲ್ಲಿ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮಸ್ಥರು ಹೇಳೋ ಪ್ರಕಾರ ಈಕೆ ಗ್ರಾಮದ ಹೊರವಲಯದ ಅರಸೀಕೆರೆ ರಸ್ತೆಯಲ್ಲಿಯೇ ಒಂಟಿಯಾಗಿ ಮನೆಯಲ್ಲಿ ವಾಸ ಮಾಡುತ್ತಿದ್ದರು. ಈಕೆಗೆ ಓರ್ವ ಪರಿಚಯಸ್ಥ ವ್ಯಕ್ತಿ ಇದ್ದು, ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ಹಣ ಅಥವಾ ಆಸ್ತಿಯ ವಿಚಾರದಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕೊಲೆಗಾರನಿಗೆ ವಿಶೇಷ ತಂಡ ರಚಿಸಿದ್ದಾರೆ.

ಈ ಸಂಬಂಧ ಹಾಸನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details