ಕರ್ನಾಟಕ

karnataka

ETV Bharat / state

ಹಾಸನ: ಗಂಡನ ಬಿಟ್ಟು ಪ್ರಿಯಕರನೊಂದಿಗೆ ವಾಸಿಸುತ್ತಿದ್ದ ಮಹಿಳೆಯ ಶವ ಪತ್ತೆ - ಈಟಿವಿ ಭಾರತ ಕನ್ನಡ

ಗಂಡನ ಬಿಟ್ಟು ಪ್ರಿಯಕರನೊಂದಿಗೆ ಸಹಜೀವನ ನಡೆಸುತ್ತಿದ್ದವಳು ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

women-found-dead-in-hasana
ಹಾಸನ: ಗಂಡನ ಬಿಟ್ಟು ಪ್ರಿಯಕರನೊಂದಿಗೆ ಹೋದವಳು ಶವವಾಗಿ ಪತ್ತೆ

By

Published : Dec 13, 2022, 9:34 PM IST

ಪ್ರಿಯಕರನೊಂದಿಗೆ ವಾಸವಿದ್ದ ಮಹಿಳೆ ಶವವಾಗಿ ಪತ್ತೆ

ಹಾಸನ:ತಾಳಿ ಕಟ್ಟಿದ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಸಹಜೀವನ ನಡೆಸುತ್ತಿದ್ದವಳು ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ. ಕಾವ್ಯ (23)ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ಕಳೆದ ಎರಡು ವರ್ಷಗಳ ಹಿಂದೆ ಕಾವ್ಯ ಹಾಸನ ಮೂಲದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಕೆಲವೇ ತಿಂಗಳಲ್ಲಿ ಗಂಡನನ್ನು ಬಿಟ್ಟು ಬಂದಿದ್ದರು. ಬಳಿಕ ಒಂದೂವರೆ ವರ್ಷದಿಂದ ಪರಸನಹಳ್ಳಿಯ ಪ್ರಿಯಕರ ಅವಿನಾಶ್​ ಜೊತೆಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಕಾವ್ಯ ಪೋಷಕರು ಅವಿನಾಶ್​ ತಮ್ಮ ಮಗಳನ್ನು ಕೊಂದು ಶವ ಹೂತು ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಎಸ್​ಪಿ ಹರಿರಾಂ ಶಂಕರ್​ ಹೇಳಿದರು.

ಸುಮಾರು ಎರಡೂವರೆ ತಿಂಗಳ ಹಿಂದಷ್ಟೇ ಪೋಷಕರ ಸಂಪರ್ಕಕ್ಕೆ ಕಾವ್ಯ ಸಿಕ್ಕಿದ್ದರು. ಈ ವೇಳೆ ತಾನು ಬೆಂಗಳೂರಿನಲ್ಲಿ ಒಂಟಿಯಾಗಿ ಪಿಜಿಯಲ್ಲಿ ಇರುವುದಾಗಿ ಪೋಷಕರ ಬಳಿ ಹೇಳಿಕೊಂಡಿದ್ದರು. ಸಾವಿನ ಸುತ್ತ ಹಲವಾರು ಅನುಮಾನಗಳಿದ್ದು, ಪೊಲೀಸ್ ತನಿಖೆಯ ನಂತರ ಸಾವಿನ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ. ಆರೋಪಿ ಹೂತು ಹಾಕಿದ್ದ ಮೃತದೇಹವನ್ನು ಹೊಳೆನರಸೀಪುರ ತಹಶೀಲ್ದಾರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಹೊರತೆಗೆಯಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಹಾಸನ.. ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ

ABOUT THE AUTHOR

...view details