ಹಾಸನ: ಕಳೆದ ಒಂದು ವಾರದ ಕಾಲ ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ.
ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು... ಮೃತಳ ಗಂಟಲು ದ್ರವ ಲ್ಯಾಬ್ಗೆ ರವಾನೆ - ಚಿಕಿತ್ಸೆ ಫಲಿಸದೆ ಬೆಳಗ್ಗೆ 6- 30 ರ ವೇಳೆಗೆ ಮಹಿಳೆ ಮೃತ
ಸತತ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಹೊಳೆನರಸೀಪುರ ತಾಲೂಕಿನ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಮೃತಳ ಸ್ವಾಬ್ ತೆಗೆದು ಲ್ಯಾಬ್ ಪರೀಕ್ಷೆಗೆ ರವಾನಿಸಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು
ಒಂದು ವಾರದಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಜ್ವರ ತೀವ್ರಗೊಂಡಿದ್ದರಿಂದ ಇಂದು ಬೆಳಗ್ಗೆ ನಗರದ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಬೆಳಗ್ಗೆ 6-30 ರ ವೇಳೆಗೆ ಮಹಿಳೆ ಮೃತಪಟ್ಟಿದ್ದು, ಮೃತದೇಹದ ಸ್ವ್ಯಾಬ್ ತೆಗೆದು ವೈದ್ಯರು ಲ್ಯಾಬ್ ಟೆಸ್ಟ್ಗೆ ರವಾನಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆ ಪರೀಕ್ಷೆಗೆ ಕ್ರಮ ಕೈಗೊಂಡಿರುವ ವೈದ್ಯರು, ಮೃತದೇಹವನ್ನ ಶವಾಗಾರದಲ್ಲಿಟ್ಟು ವರದಿಗಾಗಿ ಕಾಯುತ್ತಿದ್ದಾರೆ.
Last Updated : Apr 15, 2020, 2:15 PM IST