ಕರ್ನಾಟಕ

karnataka

ETV Bharat / state

ಖಾಸಗಿ ಹೋಟೆಲ್ ಹಿಂಭಾಗ ಯುವತಿಯ ಮೃತದೇಹ ಪತ್ತೆ; ಸಾವಿನ ಹಿಂದೆ ಅನುಮಾನ

ಬಿ.ಎಂ ರಸ್ತೆಯಲ್ಲಿರುವ ಸರಾಯು ಹೋಟೆಲ್ ಬಳಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ಯುವತಿಯ ಮೃತದೇಹ ಪತ್ತೆ

By

Published : Oct 20, 2019, 4:19 PM IST

Updated : Oct 20, 2019, 6:27 PM IST

ಹಾಸನ:ಬಿ.ಎಂ ರಸ್ತೆಯಲ್ಲಿರುವ ಸರಾಯು ಹೋಟೆಲ್ ಬಳಿ ಯುವತಿಯೋರ್ವಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ಅರಕಲಗೂಡು ಮೂಲದ ಭವಿತಾ(23) ಸಾವಿಗೀಡಾಗಿರುವ ಯುವತಿ.

ಕಳೆದ 12 ದಿನಗಳಿಂದ ಬಿಎಂ ರಸ್ತೆಯಲ್ಲಿರೋ ಹೋಟೆಲಿನಲ್ಲಿ ರೂಂ ಬುಕ್‌ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಇವತ್ತು ಬೆಳಗ್ಗೆ ಈಕೆಯ ಮೃತದೇಹ ಹೋಟೆಲ್ ಹಿಂಭಾಗದಲ್ಲಿ ಪತ್ತೆಯಾಗಿದೆ.

ಖಾಸಗಿ ಹೋಟೆಲ್ ಬಳಿ ಯುವತಿ ಮೃತದೇಹ ಪತ್ತೆ

ಯುವತಿಯನ್ನು ಕೊಲೆ ಮಾಡಲಾಗಿದೆಯೇ? ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿವೆ. ಭವಿತಾ ದೇಹದ ಹಲವು ಭಾಗಗಳಿಗೆ ಹಚ್ಚೆ ಹಾಕಿಸಿಕೊಂಡಿದ್ದು, ಮಗಳ ಸಾವಿನ ಬಗ್ಗೆ ಪೋಷಕರು ಆಘಾತ ವ್ಯಕ್ತಪಡಿಸಿದ್ದಾರೆ.

ಮಗಳ ಸಾವಿನ ಕುರಿತು ಪೋಷಕರು ಬಡಾವಣೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

Last Updated : Oct 20, 2019, 6:27 PM IST

ABOUT THE AUTHOR

...view details