ಹಾಸನ : ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಚಾಕುವಿನಿಂದ ಇರಿದಿರುವ ಪ್ರಕರಣ ಹೊಳೆನರಸೀಪುರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿನಿ ರಮ್ಯ (18, ಹೆಸರು ಬದಲಿಸಲಾಗಿದೆ) ಚಾಕುವಿನಿಂದ ಇರಿತಕ್ಕೊಳಗಾದ ಯುವತಿ.

ಪಡುವಲ ಹಿಪ್ಪೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ.ಎ ಓದುತ್ತಿರುವ ಅರಕಲಗೂಡು ತಾಲೂಕು ಕಸಬಾ ಹೋಬಳಿಯ ನೆಲಬಳ್ಳಿ ಗ್ರಾಮದ ಮಣಿಕಂಠ ಬಿನ್ ಮಲ್ಲೇಶ (19) ಯುವತಿಗೆ ಚಾಕುವಿನಿಂದ ಇರಿದ ಆರೋಪಿ.
ಈತ ಕಳೆದ ಕೆಲ ದಿನಗಳಿಂದ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದು, ಇಂದು ಕಾಲೇಜು ಮುಗಿಸಿ ಮನೆಗೆ ಹೊರಟಿದ್ದ ವೇಳೆ ಆಕೆಯನ್ನು ಹೊಳೆನರಸೀಪುರ ಬೈಪಾಸ್ ನಲ್ಲಿ ಅಡ್ಡ ಗಟ್ಟಿ ಚಾಕುವಿನಿಂದ ಇರಿದಿದ್ದಾನೆ.
ಇದರಿಂದ ಯುವತಿಯ ಕುತ್ತಿಗೆ, ಕೈಗೆ ತೀವ್ರವಾಗಿ ಗಾಯವಾಗಿದ್ದು ಹೊಳೆನರಸೀಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ದಾರಿ ಹೋಕರು ಆರೋಪಿ ಮಣಿಕಂಠನನ್ನು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.