ಕರ್ನಾಟಕ

karnataka

ETV Bharat / state

ಗೃಹಿಣಿ ಅನುಮಾನಾಸ್ಪದ ಸಾವು: ಪೋಷಕರಿಂದ ಕೊಲೆ ಆರೋಪ - ಚನ್ನರಾಯಪಟ್ಟಣದಲ್ಲಿ ಹೆಣ್ಣು ಮಗು ಹುಟ್ಟಿದಕ್ಕೆ ಯುವತಿಗೆ ಕಿರುಕುಳ ನೀಡುತ್ತಿದ್ದ ಗಂಡನ ಮನೆಯವರು

ರಾತ್ರಿ ಅತ್ತೆ ಮತ್ತು ಸೊಸೆ ನಡುವೆ ಜೋರಾಗಿ ಗಲಾಟೆ ನಡೆದಿದೆ. ಮುಂಜಾನೆ ಎದ್ದು ನೋಡುವಷ್ಟರಲ್ಲಿ ಸೊಸೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ತಕ್ಷಣ ಗಂಡನ ಕುಟುಂಬದವರೇ ಆಕೆಯ ತವರು ಮನೆಗೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

Woman murdered in Hassan district
ಹೆಣ್ಣು ಮಗು ಹುಟ್ಟಿದಕ್ಕೆ ಯುವತಿಯನ್ನ ಕೊಲೆ ಮಾಡಿರುವ ಶಂಕೆ

By

Published : Nov 3, 2020, 3:14 PM IST

Updated : Nov 3, 2020, 3:51 PM IST

ಹಾಸನ (ಚನ್ನರಾಯಪಟ್ಟಣ): ಹೆಣ್ಣು ಮಗು ಹುಟ್ಟಿತಲ್ಲ ಅನ್ನೋ ಕಾರಣಕ್ಕೆ ವರ್ಷದಿಂದ ಕಿರುಕುಳ ಕೊಡುತ್ತಿದ್ದ ಗಂಡನ ಮನೆಯವರು ಕೊನೆಗೂ ಸೊಸೆಯನ್ನು ಕೊಲೆ ಮಾಡಿ ನೇಣು ಹಾಕಿರುವ ಆರೋಪ ಕೇಳಿ ಬಂದಿದೆ.

ತಾಲೂಕಿನ ಗೂಳಿ ಹೊನ್ನೇನಹಳ್ಳಿ ಗ್ರಾಮದ ವಿದ್ಯಾ (20) ಮೃತ ದುರ್ದೈವಿ. ಎರಡು ವರ್ಷದ ಹಿಂದೆ ನುಗ್ಗೆಹಳ್ಳಿ ಸಮೀಪದ ನೆಟ್ಟೇಕೆರೆ ಗ್ರಾಮದ ಶಿವಲಿಂಗೇಗೌಡ ಮತ್ತು ಸುಮಿತ್ರಾ ಎಂಬುವರ ಮಗಳಾದ ವಿದ್ಯಾಳನ್ನು ಗೂಳಿ ಹೊನ್ನೇನಹಳ್ಳಿ ಗುರುರಾಜ್ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು.

ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ವರ್ಷದ ಹಿಂದೆ ಇವರಿಬ್ಬರ ದಾಂಪತ್ಯದ ಫಲವಾಗಿ ಹೆಣ್ಣು ಮಗು ಹುಟ್ಟಿತ್ತು. ಆದರೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಒಂದು ವರ್ಷದಿಂದ ವಿದ್ಯಾಳಿಗೆ ಕಿರುಕುಳ ನೀಡುತ್ತಿದ್ದರಂತೆ. ಜೊತೆಗೆ ಹೆಣ್ಣು ಮಗು ಸಾಕಲು ನಮ್ಮ ಬಳಿ ಹಣವಿಲ್ಲ. ನಿಮ್ಮ ಮನೆಯಿಂದ ವರದಕ್ಷಿಣೆ ತರಬೇಕು ಎಂದು ಹಲವಾರು ಬಾರಿ ಆಕೆಯನ್ನು ತವರಿಗೆ ಕಳುಹಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ಎರಡೂ ಕುಟುಂಬದ ನಡುವೆ ಮಾತುಕತೆ ನಡೆದು ಗ್ರಾಮಸ್ಥರ ಮುಖೇನ ನ್ಯಾಯ ಪಂಚಾಯಿತಿ ಕೂಡ ಆಗಿತ್ತು. ಮುಂದಿನ ಸಲವಾದರೂ ಗಂಡು ಮಗು ಆಗಬಹುದು. ಕಾದು ನೋಡಿ ಎಂದು ಪಂಚಾಯಿತಿ ಕಟ್ಟೆಯಲ್ಲಿ ತೀರ್ಮಾನ ಮಾಡಿ ಇಬ್ಬರನ್ನು ಒಂದು ಮಾಡಿದ್ದರಂತೆ.

ಆದರೆ ರಾತ್ರಿ ಅತ್ತೆ ಮತ್ತು ಸೊಸೆ ನಡುವೆ ಜೋರಾಗಿ ಗಲಾಟೆ ನಡೆದಿದೆ. ಮುಂಜಾನೆ ಎದ್ದು ನೋಡುವಷ್ಟರಲ್ಲಿ ಸೊಸೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ತಕ್ಷಣ ಗಂಡನ ಕುಟುಂಬದವರೇ ಆಕೆಯ ತವರು ಮನೆಗೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಆದರೆ ಇವರ ಮಾತನ್ನು ಅಲ್ಲಗಳೆದಿರುವ ಹುಡುಗಿ ಪೋಷಕರು ಇದು ಆತ್ಮಹತ್ಯೆಯಲ್ಲ, ಅತ್ತೆ ಮಾವ ಮತ್ತು ಗಂಡ ಸೇರಿ ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಮೃತಳ ಗಂಡ ಗುರುರಾಜ್ ತಲೆಮರೆಸಿಕೊಂಡಿದ್ದು, ಈ ಸಂಬಂಧ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕ ಸತ್ಯ ಹೊರ ಬೀಳಲಿದ್ದು, ಪ್ರಕರಣದ ಸಂಬಂಧ ಅತ್ತೆ ಸಣ್ಣತಾಯಮ್ಮ ಮತ್ತು ಮಾವ ರಮೇಶ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಗಂಡ ಗುರುರಾಜ್​​ನನ್ನು ಪತ್ತೆ ಮಾಡಲು ವಿಶೇಷ ತಂಡ ರಚನೆ ಮಾಡಿ, ಮೃತದೇಹವನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

Last Updated : Nov 3, 2020, 3:51 PM IST

ABOUT THE AUTHOR

...view details