ಕರ್ನಾಟಕ

karnataka

ETV Bharat / state

ತನ್ನನ್ನು ಮದುವೆಯಾಗಲು ಒಪ್ಪದ ಗೃಹಿಣಿಯ ಕೊಚ್ಚಿ ಕೊಲೆ; ಅನಾಥರಾದ ಮಕ್ಕಳು - Hassan Woman Murder

ತನ್ನನ್ನು ಮದುವೆಯಾಗದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಗೃಹಿಣಿಯೊಬ್ಬಳನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾಸನದ ಚಿಕ್ಕಭುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆ ನಡೆದ 24 ಗಂಟೆಯ ಒಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Woman murder by a lover in Hassan
ಪ್ರಿಯಕರನಿಂದ ಮಹಿಳೆಯ ಕೊಲೆ

By

Published : Dec 24, 2020, 1:43 AM IST

ಹಾಸನ :ಮದುವೆಯಾಗಲು ನಿರಾಕರಿಸಿದ ಹಿನ್ನೆಲೆ ಮಹಿಳೆಯೊಬ್ಬಳು ಅನೈತಿಕ ಸಂಬಂಧ ಹೊಂದಿದ ಪ್ರಿಯಕರನಿಂದಲೇ ಬರ್ಬರವಾಗಿ ಕೊಲೆ ಆಗಿರುವ ಘಟನೆ ಹಾಸನ ತಾಲೂಕಿನ ದುದ್ದ ಹೋಬಳಿಯ ಚಿಕ್ಕಭುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಾಯತ್ರಿ (30) ಕೊಲೆಯಾದ ನತದೃಷ್ಟ ಮಹಿಳೆ.

ಕೊಲೆಗೈದ ಆರೋಪಿ ಮಂಜುನಾಥನನ್ನ ಘಟನೆ ನಡೆದ 24 ಗಂಟೆಯ ಒಳಗೆ ಪೊಲೀಸರು ಬಂಧಿಸಿದ್ದಾರೆ.

ಬಡತನದಲ್ಲಿಯೇ ಬೆಳೆದ ಗಾಯಿತ್ರಿ 12 ವರ್ಷಗಳ ಹಿಂದೆ ಅದೇ ಗ್ರಾಮದ ವೆಂಕಟೇಶ ಎಂಬುವನನ್ನು ಮದುವೆಯಾಗಿದ್ದಳು. ಇವರಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಗಂಡು ಮಕ್ಕಳು ಸಹ ಇದ್ದಾರೆ. ಮದುವೆಯಾದ ಕೆಲ ದಿನಗಳ ಬಳಿಕ ಪತಿ ಅಪಘಾತವೊಂದರಲ್ಲಿ ಕಾಲು ಕಳೆದುಕೊಳ್ಳಬೇಕಾಯಿತು. ಇದರಿಂದ ಸಂಸಾರ ನೀಗಿಸಲು ಗಾಯಿತ್ರಿ ವಿಧಿಯಿಲ್ಲದೇ ಗಾರೆ ಕೆಲಸಕ್ಕೆ ಹೋಗುತ್ತಿದ್ದಳು. ಈ ವೇಳೆ ಮಂಜುನಾಥನ ಪರಿಚಯವಾಗಿತ್ತು.

ಇದನ್ನೂ ಓದಿ : ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಇಬ್ಬರ ಸ್ನೇಹ ಪ್ರೀತಿಯಾಗಿ ತಿರುಗಿತ್ತು. ದೈಹಿಕ ಸಂಪರ್ಕವನ್ನು ಹೊಂದಿದ್ದರಿಂದ ಮಂಜುನಾಥ ಮದುವೆ ಮಾಡಿಕೊಳ್ಳುವಂತೆಯೂ ಗಾಯಿತ್ರಿ ಮೇಲೆ ಒತ್ತಾಯ ತಂದಿದ್ದನು. ಇದಕ್ಕೆ ಒಪ್ಪದ ಗಾಯತ್ರಿ, ಆತನೊಂದಿಗೆ ಗಾರೆ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮತ್ತೊಬ್ಬರೊಂದಿಗೆ ಗಾರೆ ಕೆಲಸಕ್ಕೆ ಹೋಗುತ್ತಿದ್ದಳು. ಇದನ್ನು ಸಹಿಸದ ಮಂಜುನಾಥ, ಆಕೆಯನ್ನು ಮನಬಂಧಂತೆ ಕೊಚ್ಚಿ ಕೊಲೆಗೈದು ಚರಂಡಿಗೆ ಎಸೆದು ಪರಾರಿಯಾಗಿದ್ದನು.

ಪ್ರಿಯಕರನಿಂದ ಮಹಿಳೆಯ ಕೊಲೆ

ಕೊಲೆಯಾಗ ಗಾಯಿತ್ರಿಯ ಚಿತ್ರವಿತ್ರ ದೇಹವನ್ನು ನೋಡಿದ ಸ್ಥಳೀಯರು ಹಾಗೂ ಆಕೆಯ ಸ್ನೇಹಿತರು ಕಣ್ಣೀರು ಹಾಕುತ್ತಾ ಕೊಲೆಗೈದ ವ್ಯಕ್ತಿಗೆ ಶಾಪ ಹಾಕಿದ್ದಾರೆ. ಆತನನ್ನು ನಮಗೆ ತಂದು ಒಪ್ಪಿಸಿದರೆ ನಾವೇ ಅನವನನ್ನು ಕೊಲೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲು ಕಳೆದುಕೊಂಡ ಗಂಡ ಸೇರಿದಂತೆ ಮಕ್ಕಳು ಸಹ ಅನಾಥರಾಗಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಇಲ್ಲಿನ ಪೊಲೀಸರು ಆರೋಪಿ ಮಂಜುನಾಥನನ್ನು ಬಂಧಿಸಿ ಇದೀಗ ಜೈಲಿಗೆ ಅಟ್ಟಿದ್ದಾರೆ.

ABOUT THE AUTHOR

...view details