ಹಾಸನ:ಹಸಿವನ್ನ ತಾಳಲಾರದೆ ಆನೆಯೊಂದು ಹಲಸಿನ ಹಣ್ಣನ್ನು ಕಿತ್ತು ತಿನ್ನುವಂತಹ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು ಆ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ಹಸಿವು ನೀಗಿಸಿಕೊಳ್ಳಲು ಹಲಸಿನ ಮರವೇರಿದ ಕಾಡಾನೆ... ವಿಡಿಯೋ ವೈರಲ್ - ಹಾಸನ ಆನೆ
ಹಾಸನ ಜಿಲ್ಲೆಯ ಬಾಳ್ಳುಪೇಟೆ ಸಮೀಪದ ಕಾಫಿ ತೋಟವೊಂದರಲ್ಲಿ ಹಸಿವಿನಿಂದ ಬಳಲುತ್ತಿದ್ದ ಕಾಡಾನೆಯೊಂದು ಹಲಸಿನಮರದ ಮೇಲೆ ಎರಡು ಕಾಲನ್ನಿಟ್ಟು ಹಲಸಿನ ಹಣ್ಣನ್ನು ಕಿತ್ತು ತಿನ್ನುವಂತಹ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಜಿಲ್ಲೆಯ ಬಾಳ್ಳುಪೇಟೆ ಸಮೀಪದ ಕಾಫಿ ತೋಟವೊಂದರಲ್ಲಿ ಹಸಿವಿನಿಂದ ಬಳಲುತ್ತಿದ್ದ ಕಾಡಾನೆಯೊಂದು ಹಲಸಿನಮರದ ಮೇಲೆ ಎರಡು ಕಾಲನ್ನಿಟ್ಟು ಮೂರ್ನಾಲ್ಕು ಹಣ್ಣನ್ನ ಕಿತ್ತು ತಿಂದಿದೆ. ಈಗಾಗಲೇ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರಂಭವಾಗದೆ ನೀರಿನ ಬವಣೆ ಪ್ರಾರಂಭವಾಗಿದೆ. ಜೊತೆಗೆ ಆನೆಗೆ ಬೇಕಾಗುವಂತಹ ಬಿದಿರು, ಬೈನೆ (ಬಗನಿ) ಮರಗಳು ಕಡಿಮೆಯಾಗಿದೆ. ಇತ್ತ ಹಾಸನ ಮತ್ತು ಚನ್ನರಾಯಪಟ್ಟಣ ತಾಲೂಕಿನ ಹಲವೆಡೆ ರೋಹಿಣಿ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಸಾಕಷ್ಟು ಹಾನಿಯನ್ನುಂಟು ಮಾಡಿದೆ.
ಕಾಡು ಪ್ರಾಣಿಗಳು ಹೀಗೆ ಊರಿಗೆ ನುಗ್ಗಿ ಬೆಳೆಗಳನ್ನು ತಿನ್ನುವುದರಿಂದ ರೈತಾಪಿ ವರ್ಗದವರಿಗೆ ಸಂಕಷ್ಟವನ್ನು ತಂದೊಡ್ಡುತ್ತಿದೆ. ಆದರೆ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾದಂತೆ ಪ್ರಾಣಿಗಳಿಗೂ ನೀರಿನ ಬವಣೆ ಮತ್ತು ಆಹಾರದ ಸಮಸ್ಯೆ ಉಲ್ಭಣವಾಗುತ್ತಿದ್ದು, ಸದ್ಯ ಮಳೆಯಾದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಬಹುದು.