ಕರ್ನಾಟಕ

karnataka

ETV Bharat / state

ಸಿಡಿಮದ್ದು ಬಳಸಿ ಕಾಡು ಹಂದಿ ಬೇಟೆ : ಆರೋಪಿಗಳ ಪತ್ತೆಗಾಗಿ ಶೋಧ - hassan Wild boar hunting using fireworks

ಜಿಲ್ಲೆಯ ಬಾಣಾವಾರ ಸಮೀಪದ ಜಾಕನಕಟ್ಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಸಿಡಿಮದ್ದು ಬಳಸಿ ಕಾಡುಹಂದಿ ಬೇಟೆಯಾಡಿ ಅಕ್ರಮವಾಗಿ ಮಾಂಸ ಸಾಗಾಣಿಕೆ ಮಾಡಲು ಪ್ರಯತ್ನಿಸಿದ್ದ ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಪೊಲೀಸರು ಬಲೆ ಬಿಸಿದ್ದಾರೆ.

wild-boar-hunting-using-fireworks-search-for-accused-detection
ಸಿಡಿಮದ್ದು ಬಳಸಿ ಕಾಡು ಹಂದಿ ಬೇಟೆ

By

Published : Jan 18, 2020, 7:17 PM IST

ಹಾಸನ/ಬಾಣಾವಾರ: ಸಿಡಿಮದ್ದು ಬಳಸಿ ಕಾಡುಹಂದಿ ಬೇಟೆಯಾಡಿ ಅಕ್ರಮವಾಗಿ ಮಾಂಸ ಸಾಗಾಣಿಕೆ ಮಾಡಲು ಪ್ರಯತ್ನಿಸಿದ್ದ ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಪೊಲೀಸರು ಬಲೆ ಬಿಸಿದ್ದಾರೆ.

ಅರಸೀಕೆರೆ ವಲಯ ಅರಣ್ಯ ವ್ಯಾಪ್ತಿಯ ಬಾಣಾವರ ಸಮೀಪವಿರುವ ಜಾಕನಕಟ್ಟೆ ಮೀಸಲು ಅರಣ್ಯದಲ್ಲಿ ಕೊಟ್ರೇಶ್ ಮತ್ತು ನಂಜುಂಡಪ್ಪ ಎಂಬ ಆರೋಪಿಗಳು ಸಿಡಿಮದ್ದು ಬಳಸಿ ಕಾಡುಹಂದಿ ಬೇಟೆಯಾಡಿ ಮಾಂಸ ಸಾಗಾಣಿಕೆ ಮಾಡಲು ಪ್ರಯತ್ನಿಸಿದ್ದರು.

ಈ ಕುರಿತು ಮಾಹಿತಿ ತಿಳಿದು ದಾಳಿ ನಡೆಸಿದ ಅರಣ್ಯ ಇಲಾಖೆ ಪೊಲೀಸರು 3.9 ಕೆಜಿ ಕಾಡುಹಂದಿ ಮಾಂಸ ಮತ್ತು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರವಾಹನ ಹಾಗೂ 3 ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡು ಆರೋಪಿಗಳ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಾಪತ್ತೆಯಾದವರ ಶೋಧಕಾರ್ಯ ನಡೆಸಿದ್ದಾರೆ.

ABOUT THE AUTHOR

...view details