ಕರ್ನಾಟಕ

karnataka

ETV Bharat / state

ಪತಿಯನ್ನು ಬಿಟ್ಟು ಪರಪುರುಷನೊಟ್ಟಿಗೆ ಪತ್ನಿ ಪರಾರಿ: ಆಸ್ಪತ್ರೆಯಲ್ಲಿ ಗಂಡ - hassan latest crime news

ಮದುವೆಯಾಗಿ ಒಂದು ಮಗುವಿದ್ದರೂ ಪತ್ನಿ ಪರ ಪುರುಷನೊಂದಿಗೆ ರಾತ್ರೋರಾತ್ರಿ ಎಸ್ಕೇಪ್ ಆಗಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಮಾರಗೊಂಡನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

wife escape with her boyfriend
ಪರಪುರುಷನೊಟ್ಟಿಗೆ ಪತ್ನಿ ಎಸ್ಕೇಪ್​.

By

Published : Feb 16, 2020, 10:50 AM IST

ಹಾಸನ:ಮದುವೆಯಾಗಿ ಒಂದು ಮಗುವಿದ್ದರೂ ಪತ್ನಿ ಪರ ಪುರುಷನೊಂದಿಗೆ ರಾತ್ರೋರಾತ್ರಿ ಎಸ್ಕೇಪ್ ಆಗಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಮಾರಗೊಂಡನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಪರಪುರುಷನೊಟ್ಟಿಗೆ ಪತ್ನಿ ಎಸ್ಕೇಪ್​.

5 ವರ್ಷಗಳ ಹಿಂದೆ ರಮ್ಯಾ ಹಾಗೂ ಆನಂದ್​​ ಕುಮಾರ್​ ಮದುವೆಯಾಗಿತ್ತು. ಇಬ್ಬರಿಗೂ ಒಂದು ಗಂಡು ಮಗುವಾಗಿ ಸಂಸಾರ ಚೆನ್ನಾಗೇ ಇತ್ತು. ಈ ನಡುವೆ ಆನಂದ್-ರಮ್ಯಾ ಸಂಸಾರದೊಳಕ್ಕೆ 3 ವ್ಯಕ್ತಿ ಎಂಟ್ರಿ ಕೊಟ್ಟ,ಆತನೊಂದಿಗೆ ರಮ್ಯಾ ಅಕ್ರಮ ಸಂಬಂಧ ಬೆಳೆಸಿದ್ಲು. ತನ್ನ ಕಣ್ಣಾ ಮುಚ್ಚಾಲೆ ಆಟ ಬಯಲಾದ್ರೆ ಸಮಸ್ಯೆಯಾಗಲಿದೆ ಎಂದೆಣಿಸಿದ ರಮ್ಯಾ ಕೈ ಹಿಡಿದ ಗಂಡನಿಗೇ ಖೆಡ್ಡಾ ತೋಡಲು ಸ್ಕೆಚ್ ಹಾಕಿದಳು. ಯಾವತ್ತೂ ಪತಿಗಾಗಿ ಕಾಯದೆ ಊಟ ಮಾಡಿ ಮಲಗುತ್ತಿದ್ದ ರಮ್ಯಾ ಅಂದು ಗಂಡ ಬರೋವರೆಗೂ ಕಾದು ಆಕೆಯೇ ಊಟ ಬಡಿಸಿದಳು.ಅದಕ್ಕೂ ಮುನ್ನವೇ ಊಟಕ್ಕೆ ನಿದ್ರೆ ಮಾತ್ರೆ ಸೇರಿಸಿದ್ದಳು. ರಾತ್ರಿ ಒಂದು ಗಂಟೆ ಸುಮಾರಿಗೆ ಪ್ರಿಯಕರನ್ನು ಕರೆಸಿಕೊಂಡ ರಮ್ಯಾ ಇಬ್ಬರೂ ಸೇರಿ ವೇಲ್‌ನಿಂದ ಕುತ್ತಿಗೆ ಬಿಗಿದು ಗಾಢನಿದ್ರೆಯಲ್ಲಿದ್ದ ಪತಿ ಆನಂದ್​​ನನ್ನು ಮುಗಿಸಲು ಮುಂದಾದರು. ಆ ವೇಳೆಗೆ ಎಚ್ಚರಗೊಂಡ ಆನಂದ್ ಕೂಗಿಕೊಂಡ ಸದ್ದು ಕೇಳಿ ಆತನ ತಾಯಿ ಓಡಿ ಬಂದಿದ್ದಾಳೆ. ಇದನ್ನು ಕಂಡ ರಮ್ಯಾ ಹಾಗೂ ಪ್ರಿಯಕರ ಬೈಕ್ ಏರಿ ಎಸ್ಕೇಪ್​ ಆಗಿದ್ದಾರೆ.

ಇನ್ನು ಇವರಿಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಎಸ್ಪಿ ಆರ್.ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ABOUT THE AUTHOR

...view details