ಕರ್ನಾಟಕ

karnataka

ETV Bharat / state

ರಾಷ್ಟ್ರ ಭಕ್ತಿಯ ವಿಚಾರವನ್ನು ಯಾರೂ ಸುಡಲು ಆಗಲ್ಲ, ಚಡ್ಡಿ ಸುಡಬಹುದು ಅಷ್ಟೇ : ಸಿ ಟಿ ರವಿ - ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆಯುತ್ತಿರುವ ರಣಘಟ್ಟ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿದ ಸಿ ಟಿ ರವಿ

ಆರ್.ಎಸ್.ಎಸ್. ಚಡ್ಡಿ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ವಿಚಾರವಾಗಿ ಮಾತನಾಡಿದ ಸಿ ಟಿ ರವಿ ಅವರು, ರಾಷ್ಟ್ರೀಯ ಸ್ಬಯಂ ಸೇವಕ ಸಂಘ 1925 ರಲ್ಲಿ ಆರಂಭವಾಯಿತು. ಅದು ದೊಡ್ಡ ಸ್ಟೇಜ್ ನಿಂದ ಪ್ರಾರಂಭವಾದುದ್ದಲ್ಲ, ಒಂದು ಶಾಖೆಯ ಮೂಲಕ ಆರಂಭವಾಗಿದೆ. ಭಗವಾಧ್ವಜ, ಕಬಡ್ಡಿ ಆಟದ ಮೂಲಕ‌ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಲಾಯಿತು ಎಂದು ಹೊಗಳಿದರು.

ರಾಷ್ಟ್ರ ಭಕ್ತಿಯ ವಿಚಾರವನ್ನು ಯಾರು ಸುಡಲು ಆಗಲ್ಲ ಚಡ್ಡಿ ಸುಡಬಹುದು ಎಂದ ಸಿ ಟಿ ರವಿ
ರಾಷ್ಟ್ರ ಭಕ್ತಿಯ ವಿಚಾರವನ್ನು ಯಾರು ಸುಡಲು ಆಗಲ್ಲ ಚಡ್ಡಿ ಸುಡಬಹುದು ಎಂದ ಸಿ ಟಿ ರವಿ

By

Published : Jun 9, 2022, 3:06 PM IST

Updated : Jun 9, 2022, 3:16 PM IST

ಬೇಲೂರು (ಹಾಸನ): ಆರ್. ಎಸ್. ಎಸ್ ಎಂದರೆ ದೇಶ ಕಾಯುವವರ ಸಂಘ. ಹಾಗಾಗಿಯೇ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿದ್ದು, ಬಿಜೆಪಿ ಯಾರನ್ನೂ ದ್ವೇಷಿಸುವುದಿಲ್ಲ. ದಲಿತ ವಿರೋಧಿಯೂ ಅಲ್ಲ. ಹಾಗಿದ್ದರೆ ರಾಷ್ಟ್ರಪತಿ ಹುದ್ದೆಯನ್ನು ರಾಮನಾಥ್​ ಕೋವಿಂದ್ ಅವರಿಗೆ ನೀಡುತ್ತಿರಲಿಲ್ಲ. ಇದನ್ನು ಪ್ರತಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು ಅಂತ ಸಿದ್ದರಾಮಯ್ಯಗೆ ಪರೋಕ್ಷವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಟಾಂಗ್ ನೀಡಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆಯುತ್ತಿರುವ ರಣಘಟ್ಟ ಏತ ನೀರಾವರಿ ಯೋಜನೆಯ ಕಾಮಗಾರಿ ವೀಕ್ಷಣೆ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಆರ್.ಎಸ್.ಎಸ್. ಚಡ್ಡಿ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರೀಯ ಸ್ಬಯಂ ಸೇವಕರ ಸಂಘ 1925 ರಲ್ಲಿ ಆರಂಭವಾಯಿತು. ಅದು ದೊಡ್ಡ ಸ್ಟೇಜ್ ನಿಂದ ಪ್ರಾರಂಭವಾದುದ್ದಲ್ಲ, ಒಂದು ಶಾಖೆಯ ಮೂಲಕ ಆರಂಭವಾಗಿದೆ. ಭಗವಾಧ್ವಜ, ಕಬಡ್ಡಿ ಆಟದ ಮೂಲಕ‌ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಲಾಯಿತು. ಜಾತೀಯತೆ, ಅಸ್ಪೃಶ್ಯತೆ ಇರಬಾರದು, ರಾಷ್ಟ್ರ ಭಕ್ತಿ ಪ್ರೇರಣೆ ಸಿಗಬೇಕು ಎಂಬುದು ಇದರ ಉದ್ದೇಶ. ದೇಶಕ್ಕಾಗಿ ಕೆಲಸ ಮಾಡುವ ಒಂದು ದೊಡ್ಡ ಪಡೆಯನ್ನು ನಿರ್ಮಾಣ ಮಾಡಿತು ಎಂದು ಹೊಗಳಿದರು.

ರಾಷ್ಟ್ರ ಭಕ್ತಿಯ ವಿಚಾರವನ್ನು ಯಾರೂ ಸುಡಲು ಆಗಲ್ಲ, ಚಡ್ಡಿ ಸುಡಬಹುದು ಅಷ್ಟೇ : ಸಿ ಟಿ ರವಿ

ಕಾಂಗ್ರೆಸ್‌ನವರು ಮಾಡಲು ಕೆಲಸ ಇಲ್ಲ ಎಂಬಂತೆ ಚಡ್ಡಿ ಸುಡುತ್ತಿದ್ದಾರೆ. ನಮ್ಮ ರಾಷ್ಟ್ರ ಭಕ್ತಿಯ ವಿಚಾರವನ್ನು ಯಾರಿಂದಲೂ ಸುಡಲು ಸಾಧ್ಯವಿಲ್ಲ. ಚಡ್ಡಿ ಸುಡಬಹುದು, ಸುಡಲಿ. ರಾಜ್ಯದ ಜನರಿಗೆ ಈಗಾಗಲೇ ಹೇಳಿದ್ದೀವಿ. ಯಾರ್ಯಾರದ್ದು ಹಳೇ ಚಡ್ಡಿ ಇದೆಯೋ ಕಳ್ಸಿ ಅಂಥ ಹೇಳಿದ್ದೇವೆ. ಕೆಪಿಸಿಸಿ ಕಚೇರಿಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ನಲಪಾಡ್ ಮನೆಗೂ ಕಳುಹಿಸಬಹುದು. ಯಾರ್ಯಾರ ಹಳೇ ಚಡ್ಡಿ ವೇಸ್ಟ್ ಆಗಿ ಮನೇಲಿ ಬಿದ್ದಿಯೋ ಎಲ್ಲವನ್ನೂ ಪಾರ್ಸಲ್ ಮಾಡಿ ಕಳ್ಸಿ, ಅವರು ಚಡ್ಡಿ ಸುಟ್ಕಂಡು ಇರಲಿ. ನಾವು ದೇಶ ಕಾಯುತ್ತಾ ಇರುತ್ತೇವೆ ಎಂದು ಸಿ ಟಿ ರವಿ ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಸರ್ಕಾರದಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿರಬಹುದು. ಆದರೆ, ಅದರ ಅನುಷ್ಠಾನ ಮತ್ತು ಹಣ ಬಿಡುಗಡೆ ಮಾಡಿದ್ದು ನಮ್ಮ ಸರ್ಕಾರ. ಕಾಮಗಾರಿ ಕೆಲವೊಮ್ಮೆ ವಿಳಂಬವಾಗುತ್ತದೆ. ಆದರೆ, ನಮ್ಮ ಸರ್ಕಾರ ಯೋಜನೆಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದು, ಈಗ ಕಾಮಗಾರಿ ಸಾಗುತ್ತಿದೆ. ಬರಪೀಡಿತ ತಾಲೂಕುಗಳಿಗೆ ಸದ್ಯದಲ್ಲಿಯೇ ನೀರು ನೀಡುವ ಕಾರ್ಯ ಮತ್ತು ಕೆರೆ ತುಂಬಿಸುವ ಕೆಲಸ ಆಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸರಗಳ್ಳತನ ಮಾಡಿ ಮೋಜು- ಮಸ್ತಿ, ವೇಶ್ಯೆಯರ ಸಂಘ ಮಾಡ್ತಿದ್ದ ಆರೋಪಿಗಳ ಬಂಧನ

Last Updated : Jun 9, 2022, 3:16 PM IST

For All Latest Updates

TAGGED:

ABOUT THE AUTHOR

...view details