ಹಾಸನ: ಮಾರನಹಳ್ಳಿಯಿಂದ ಹಾಸನ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಗುಂಡಿ ಮುಚ್ಚುವ ಕೆಲಸವನ್ನು ವಾರದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ್ದರೂ ಯಾವುದೇ ಪ್ರಗತಿಯಾಗಿಲ್ಲ. ರಸ್ತೆ ಅಪಘಾತವೇನಾದರೂ ಸಂಭವಿಸಿದರೆ ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂಜಿನಿಯರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು.
ಇದನ್ನೂ ಓದಿ:ಬಿಎಸ್ವೈ ಕೊಟ್ಟ ಮಾತು ಮುರಿಯದ ಸಿಎಂ; ಸಚಿವ ಸ್ಥಾನಕ್ಕೆ ಗ್ಯಾರಂಟಿ ನೀಡಿದ ಗೋಪಾಲಯ್ಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭವಾಗಿ ಸಾಕಷ್ಟು ದಿನಗಳೇ ಕಳೆದರೂ ಪೂರ್ಣಗೊಂಡಿಲ್ಲ. ನಿಧಾನಗತಿಯ ಕಾಮಗಾರಿಗೆ ಏನು ಕಾರಣ ಎಂಬುದು ತಿಳಿದುಬರುತ್ತಿಲ್ಲ. ಡಿ.6ಕ್ಕೆ ಸಕಲೇಶಪುರದಲ್ಲಿ ಅಧಿಕಾರಿಗಳ ಸಭೆ ಏರ್ಪಡಿಸಿದ್ದು ವಿಸ್ತೃತ ಚರ್ಚೆ ನಡೆಸಲಾಗುವುದು ಎಂದರು.