ಹಾಸನ: ಮಹಾನೀಯರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು ಹಾಗೂ ಮಹಾವೀರರ ಅಹಿಂಸಾ ತತ್ವ ಮತ್ತು ಬೋಧನೆಗಳನ್ನು ಮೈಗೂಡಿಸಿಕೊಂಡು ದೇಶದ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಶಾಸಕ ಪ್ರೀತಮ್ ಜೆ. ಗೌಡ ತಿಳಿಸಿದ್ದಾರೆ.
ಮಹಾವೀರರ ಅಹಿಂಸಾ ತತ್ತ್ವಗಳನ್ನು ಮೈಗೂಡಿಸಿಕೊಳ್ಳಬೇಕಿದೆ: ಶಾಸಕ ಪ್ರೀತಂಗೌಡ
ಮಹಾನೀಯರ ತತ್ತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು ಹಾಗೂ ಮಹಾವೀರರ ಅಹಿಂಸಾ ತತ್ತ್ವ ಮತ್ತು ಬೋಧನೆಗಳನ್ನು ಮೈಗೂಡಿಸಿಕೊಂಡು ದೇಶದ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಶಾಸಕ ಪ್ರೀತಮ್ ಜೆ. ಗೌಡ ತಿಳಿಸಿದ್ದಾರೆ. ಮಹಾವೀರ್ ಚಂದ್ ಬನ್ಸಾಲಿ ಅವರು ಮಾತನಾಡಿ ಮಹಾವೀರರ ಬೋಧನೆಗಳನ್ನು ಜನರು ಅನುಸರಿಸಿ ಯಾವುದೇ ಜಾತಿ ಧರ್ಮಗಳ ಭೇದ ಭಾವವಿಲ್ಲದೇ ಎಲ್ಲರೂ ಏಕತೆಯಿಂದ ಒಗ್ಗೂಡಿ ಬದುಕುವ ಮೂಲಕ ಮಹನೀಯರ ತತ್ತ್ವಗಳಿಗೆ ಅರ್ಥ ಸಿಗುವಂತೆ ಮಾಡಬೇಕು ಎಂದರು.
ನಗರದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಯೋಜಿಸಲಾಗಿದ್ದ ಮಹಾವೀರರ 2619ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ಏಕತೆಯಿಂದ ಬದುಕಬೇಕು ಮತ್ತು ದೇಶದ ಏಳಿಗೆಗಾಗಿ ಶ್ರಮಿಸಬೇಕು ಎಂದರು.
ಪ್ರಸ್ತುತ ಎಲ್ಲರೂ ಅಹಿಂಸಾ ತತ್ತ್ವವನ್ನು ಇನ್ನಷ್ಟು ಅನುಸರಿಸಬೇಕು ಇಡೀ ಸಮುದಾಯದ ಹಿತವನ್ನು ಬಯಸಬೇಕು ಎಂದರು. ಮಹಾವೀರ್ ಚಂದ್ ಬನ್ಸಾಲಿ ಅವರು ಮಾತನಾಡಿ ಮಹಾವೀರರ ಬೋಧನೆಗಳನ್ನು ಜನರು ಅನುಸರಿಸಿ ಯಾವುದೇ ಜಾತಿ ಧರ್ಮಗಳ ಭೇದ ಭಾವವಿಲ್ಲದೇ ಎಲ್ಲರೂ ಏಕತೆಯಿಂದ ಒಗ್ಗೂಡಿ ಬದುಕುವ ಮೂಲಕ ಮಹನೀಯರ ತತ್ತ್ವಗಳಿಗೆ ಅರ್ಥ ಸಿಗುವಂತೆ ಮಾಡಬೇಕು ಎಂದರು.