ಕರ್ನಾಟಕ

karnataka

ETV Bharat / state

ಹಾಸನ: ಕುಸಿದು ಬಿದ್ದ ನೀರಿನ ಟ್ಯಾಂಕ್, ತಪ್ಪಿದ ಅನಾಹುತ - water tank collapsed

ನಾಲ್ಕು ದಶಕಗಳಿಂದ ದೊಡ್ಡಗದ್ದವಳ್ಳಿ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದ್ದ ಟ್ಯಾಂಕ್​ವೊಂದು ಕುಸಿದು ಬಿದ್ದಿದೆ. ನೂತನ ನೀರಿನ ಟ್ಯಾಂಕ್ ಮರುನಿರ್ಮಾಣ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

water tank collapsed in hassan
ದೊಡ್ಡಗದ್ದವಳ್ಳಿ ಗ್ರಾಮದಲ್ಲಿ ಕುಸಿದು ಬಿದ್ದ ನೀರಿನ ಟ್ಯಾಂಕ್

By

Published : Jul 25, 2021, 2:37 PM IST

ಹಾಸನ: ನಾಲ್ಕು ದಶಕದ ಹಿಂದೆ ನಿರ್ಮಿಸಿದ್ದ ನೀರಿನ ಟ್ಯಾಂಕ್​ ಕುಸಿದು ಬಿದ್ದ ಘಟನೆ ಹಾಸನ ತಾಲೂಕಿನ ದೊಡ್ಡಗದ್ದವಳ್ಳಿ ಗ್ರಾಮದಲ್ಲಿ ನಡೆದಿದೆ.

ನಾಲ್ಕು ದಶಕಗಳಿಂದ ಈ ಟ್ಯಾಂಕ್ ಮೂಲಕವೇ ದೊಡ್ಡಗದ್ದವಳ್ಳಿ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. ಮೂರ್ನಾಲ್ಕು ವರ್ಷಗಳ ಹಿಂದೆಯೇ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿತ್ತು. ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರೂ ದುರಸ್ತಿ ಕಾರ್ಯ ನಡೆದಿರಲಿಲ್ಲ. ಇದೀಗ ನಿರಂತರವಾಗಿ ಸುರಿದ ಮಳೆಯಿಂದಾಗಿ ಟ್ಯಾಂಕ್ ಕುಸಿದು ಬಿದ್ದಿದೆ.

ದೊಡ್ಡಗದ್ದವಳ್ಳಿ ಗ್ರಾಮದಲ್ಲಿ ಕುಸಿದು ಬಿದ್ದ ನೀರಿನ ಟ್ಯಾಂಕ್

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥರು, ಹಗಲು ವೇಳೆ ಈ ಘಟನೆ ಸಂಭವಿಸಿದ್ರೆ ದೊಡ್ಡ ಅನಾಹುತವಾಗುತ್ತಿತ್ತು. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದಷ್ಟು ಬೇಗ ನೂತನ ನೀರಿನ ಟ್ಯಾಂಕ್ ಮರು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details