ಹಾಸನ: ಹೇಮಾವತಿ ನದಿಯಿಂದ ಕುಡಿಯುವ ಉದ್ದೇಶಕ್ಕೆ ನೀರು ಬಿಡಲು ನೀರಾವರಿ ಸಲಹಾ ಸಮಿತಿ ಸಭೆ ಕರೆಯುವ ಅವಶ್ಯಕತೆ ಇಲ್ಲ. ಆದರೆ, ನೀರು ಬಿಡುವ ಅಧಿಕಾರ ಮುಖ್ಯಮಂತ್ರಿಗೆ ಇದೆ. ಹಾಗಾಗಿ ಯಾವ ಜಿಲ್ಲೆಗೂ ತಾರತಮ್ಯ ಮಾಡದೇ ನೀರು ಹರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದರು.
ಯಾವ ಜಿಲ್ಲೆಗೂ ತಾರತಮ್ಯ ಮಾಡದೇ ನೀರು ಹರಿಸಲಾಗಿದೆ: ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ - Minister Madhuswamy
ಹೇಮಾವತಿ ನದಿಯಿಂದ ಕುಡಿಯುವ ಉದ್ದೇಶಕ್ಕೆ ನೀರು ಬಿಡಲು ನೀರಾವರಿ ಸಲಹಾ ಸಮಿತಿ ಸಭೆ ಕರೆಯುವ ಅವಶ್ಯಕತೆ ಇಲ್ಲ, ಆದರೆ, ನೀರು ಬಿಡುವ ಅಧಿಕಾರ ಸಿಎಂಗೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ನದಿಯಿಂದ ಜ.31 ರ ನಂತರ ಕುಡಿಯುವ ಹೊರತಾಗಿ ಬೆಳೆಗಳಿಗೆ ನೀರು ಬಿಡಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಜಿಲ್ಲಾ ಮಟ್ಟದಲ್ಲಿಯೂ ಇದರ ಸಭೆ ಮಾಡಲಾಯಿತು. ಆದರೆ, ಶಾಸಕ ರೇವಣ್ಣ ಸಭೆಯ ನಿರ್ಧಾರಗಳಿಗೆ ಒಪ್ಪದೇ ಇದ್ದ ಕಾರಣ, ಈ ವಿಚಾರವನ್ನು ಸಿಎಂ ಗಮನಕ್ಕೆ ತರಲಾಯಿತು ಎಂದು ಸ್ಪಷ್ಟಪಡಿಸಿದರು.
ಇನ್ನು ಕೋವಿಡ್ ಬಗ್ಗೆ ಮಾತನಾಡಿದ ಅವರು, ಕೊರೊನಾ ವೈರಸ್ ಅನ್ನು ನಿಯಂತ್ರಿಸುವ ಕಾರ್ಯದಲ್ಲಿ ಹಾಸನ ಜಿಲ್ಲಾಡಳಿತ ಉತ್ತಮ ಕ್ರಮಗಳನ್ನು ಕೈಗೊಂಡಿದೆ. ಕಾನೂನುಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಿ ಸಹಕಾರ ನೀಡಿದ್ದಾರೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಿಂದ ಸೋಂಕು ಬಂದಿದೆಯೇ ಹೊರತು ಜಿಲ್ಲೆಯವರಿಗೆ ಬಂದಿಲ್ಲ ಎಂದು ತಿಳಿಸಿದರು.