ಚನ್ನರಾಯಪಟ್ಟಣ: ಮಳೆಗೆ ಮನೆಯ ಗೋಡೆ ಕುಸಿದಿದ್ದು, ಅಲ್ಲಿ ವಾಸವಿದ್ದ ಕುಟುಂಬ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣ ಬೆಳಗೊಳದಲ್ಲಿ ನಡೆದಿದೆ.
ಮಳೆಗೆ ಮನೆ ಗೋಡೆ ಕುಸಿತ: ಬೀದಿಗೆ ಬಿದ್ದ ದಿನಗೂಲಿ ಕುಟುಂಬ - heavy rain fall in hassan
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಮಳೆಗೆ ಮನೆ ಗೋಡೆ ಕುಸಿದಿದೆ. ಇದರಲ್ಲಿ ವಾಸವಿದ್ದ ತಾಯಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಸರ್ಕಾರದ ಸಹಾಯ ಎದುರು ನೋಡುತ್ತಿದ್ದಾರೆ. ದಿನಗೂಲಿ ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬ ಕಂಗಾಲಾಗಿದೆ.
ಮಳೆಗೆ ಮನೆ ಗೋಡೆ ಕುಸಿತ
ಶ್ರೀಕಂಠ ನಗರದ ನಿವಾಸಿ ಮಂಜುಳಮ್ಮ ಎಂಬುವವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದ ಮನೆ ಈಗ ಮಳೆಗೆ ಕುಸಿದು ಬಿದ್ದಿದ್ದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಸೂರು ಇಲ್ಲವಾಗಿದೆ.
ಲಾಕ್‌ಡೌನ್ ನಂತರ ಸರಿಯಾಗಿ ಕೂಲಿಯೂ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದಿಂದ ಪರಿಹಾರ ನೀಡುವಂತೆ ಮನವಿ ಮಾಡಿದರು.