ಕರ್ನಾಟಕ

karnataka

ETV Bharat / state

ಹಾಸನದಲ್ಲಿ ವಿಶ್ವಮಾನವ ಕೇಂದ್ರ ಸ್ಥಾಪನೆ: ಹೆಚ್​ಡಿಡಿ - HD Devegowda in Hassan

ಡಾ. ಎ.ಸಿ. ಮುನಿವೆಂಕಟೇಗೌಡರು ಸಮಾಜ ಸೇವೆಯನ್ನು ಮೈಗೂಡಿಸಿಕೊಂಡಿದ್ದ ವ್ಯಕ್ತಿ, ಜಿಲ್ಲೆ ಅಷ್ಟೇ ಅಲ್ಲದೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಬರುವ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿದ ಆದರ್ಶ ವ್ಯಕ್ತಿ. ಕೊನೆಗೆ ತಮ್ಮ ಪಾರ್ಥಿವ ಶರೀರವನ್ನು ಕೂಡ ಮೈಸೂರಿನ ವೈದ್ಯಕೀಯ​ ಕಾಲೇಜಿಗೆ ದಾನ ಮಾಡಿದ ಕರುಣಾಮಯಿ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಬಣ್ಣಿಸಿದರು.

HD Devegowda
ಹೆಚ್​ಡಿಡಿ

By

Published : Mar 1, 2020, 8:47 PM IST

ಹಾಸನ: ನಗರದಲ್ಲಿ ವಿಶ್ವಮಾನವ ಕೇಂದ್ರವನ್ನು ಸ್ಥಾಪಿಸಲು ಪ್ರಯತ್ನಿಸಲಾಗುವುದು, ಅದರ ನೇತೃತ್ವನ್ನು ತಾವೇ​ ವಹಿಸಿಕೊಳ್ಳುವುದಾಗಿ​ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭರವಸೆ ನೀಡಿದ್ದಾರೆ.​ ​

ಡಾ. ಎಸಿಎಂ ಸ್ಮರಣೆ​ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ ​ಡಿ ದೇವೇಗೌಡ

ನಗರದ ಮಹಾವೀರ ಭನದಲ್ಲಿ ಡಾ. ಎ.ಸಿ ಮುನಿವೆಂಕಟೇಗೌಡ ಚಾರಿಟೇಬಲ್ ಟ್ರಸ್ಟ್, ಬೆಂಗಳೂರಿನ ಆಶ್ರಯ ಸೆಂಟರ್ ಫಾರ್ ಟ್ರಾನ್ಸ್​ಫಾರ್ಮೆಷನ್ ಮತ್ತು ಡಾ.ಎಸಿಎಂ ನೆನಪಿನ ಬಳಗದಿಂದ ಆಯೋಜಿಸಿದ್ದ ಡಾ. ಎಸಿಎಂ ಸ್ಮರಣೆ​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ಶಾಂತಿ ಕದಡುವಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆ ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಸಾರಲು ಹಾಸನದಲ್ಲೂ ವಿಶ್ವಮಾನವ ಕೇಂದ್ರ ಸ್ಥಾಪಿಸಬೇಕು ಎಂದು ಡಾ. ಎಸಿಎಂ ಕನಸು ಕಂಡಿದ್ದರು. ಅದರಂತೆ ಜಿಲ್ಲೆಯಲ್ಲಿ ವಿಶ್ವಮಾನವ ಕೇಂದ್ರ ಸ್ಥಾಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಡಾ. ಎ.ಸಿ. ಮುನಿವೆಂಕಟೇಗೌಡರು ಸಮಾಜ ಸೇವೆಯನ್ನು ಮೈಗೂಡಿಸಿಕೊಂಡಿದ್ದ ವ್ಯಕ್ತಿ, ಜಿಲ್ಲೆ ಅಷ್ಟೇ ಅಲ್ಲದೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಬರುವ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿದ ಆದರ್ಶ ವ್ಯಕ್ತಿ. ಕೊನೆಗೆ ತಮ್ಮ ಪಾರ್ಥಿವ ಶರೀರವನ್ನು ಕೂಡ ಮೈಸೂರಿನ ವೈದ್ಯಕೀಯ​ ಕಾಲೇಜಿಗೆ ದಾನ ಮಾಡಿದ ಕರುಣಾಮಯಿ ಎಂದು ಶ್ಲಾಘಿಸಿದರರು.

ತಮ್ಮ ಜೀವನದಲ್ಲಿ​ ಮುನಿವೆಂಕಟೇಗೌಡರಂತಹ ನಿಸ್ವಾರ್ಥ ಸೇವೆಯ ವ್ಯಕ್ತಿಯನ್ನು​ ಬೇರೆಲ್ಲೂ ನೋಡಿಲ್ಲ. ಸಂಜೀವಿನಿ ಸಹಕಾರಿ ಆಸ್ಪತ್ರೆ ಸ್ಥಾಪಿಸಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿದ್ದರು. ಸೋಲು ಗೆಲುವಿನ ನಡುವೆ ತಮಗೆ ಮಾರ್ಗದರ್ಶನ ಮಾಡಿದ್ದಾರೆ. ಯಾವುದೇ​ ಸ್ಥಾನ ಮಾನಕ್ಕೂ ಆಸೆ ಪಡದೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು ಎಂದು ದೇವೇಗೌಡ ಸ್ಮರಿಸಿದರು.​

ABOUT THE AUTHOR

...view details