ಹಾಸನ:ದೈವ ಶಕ್ತಿ ಹೊಂದಿದವರು ವಿಶ್ವಕರ್ಮರು. ದೇವತೆಗಳಿಗೆ ಸ್ವರ್ಗವನ್ನು ಕಟ್ಟಿದವರು. ಈ ಸಮುದಾಯದವರು ಅತ್ಯಂತ ಕೌಶಲ್ಯ ಹೊಂದಿದವರಾಗಿದ್ದಾರೆ. ಸರ್ಕಾರದಿಂದ ಸಿಗುವ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದರು.
ದೇವ ಶಕ್ತಿ ಹೊಂದಿದವರು ವಿಶ್ವಕರ್ಮರು: ಹಾಸನ ಡಿಸಿ
ದೈವ ಶಕ್ತಿ ಹೊಂದಿದವರು ವಿಶ್ವಕರ್ಮರು. ದೇವತೆಗಳಿಗೆ ಸ್ವರ್ಗವನ್ನು ಕಟ್ಟಿದವರು. ಈ ಸಮುದಾಯದವರು ಅತ್ಯಂತ ಕೌಶಲ್ಯ ಹೊಂದಿದವರಾಗಿದ್ದಾರೆ. ಸರ್ಕಾರದಿಂದ ಸಿಗುವ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜದವರಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುಕೂಲ ಮಾಡಿದೆ. ಈ ನಿಗಮದ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ವಿಶ್ವಕರ್ಮರು ಎಂದರೇ ದೈವ ಶಕ್ತಿ ಹೊಂದಿದವರು. ದೇವತೆಗಳಿಗೆ ಸ್ವರ್ಗವನ್ನು ಕಟ್ಟಿದವರು. ಈ ಸಮುದಾಯದವರು ಅತ್ಯಂತ ಕೌಶಲ್ಯ ಹೊಂದಿದವರಾಗಿದ್ದಾರೆ. ಮೊದಲು ಅಗಸಾಲೆಯನ್ನು ಮನೆಗೆ ಕರೆಯಿಸಿ ಒಡವೆ ಮಾಡಿಸಲಾಗುತಿತ್ತು. ಇಂದು ಬದಲಾದ ದಿನಗಳಲ್ಲಿ ನಾವು ದೊಡ್ಡ ದೊಡ್ಡ ಶೋರೂಮ್‌ಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಇರುವ ಕೌಶಲ್ಯವನ್ನು ಹೆಚ್ಚು ಮಾಡಿಕೊಂಡು ತಮ್ಮದೆಯಾದ ಉದ್ಯಮವನ್ನು ಪ್ರಾರಂಭಿಸುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರಮುಖವಾದ ಪಾತ್ರವನ್ನು ವಿಶ್ವಕರ್ಮ ಸಮುದಾಯ ವಹಿಸಬೇಕು ಎಂದರು.