ಹಾಸನ: ಕೊರೊನಾ ಲಾಕ್ಡೌನ್ ನಡುವೆ ನಿಯಮ ಉಲ್ಲಂಘನೆ ಮಾಡಿ ಗ್ರಾಮಸ್ಥರು ಮೀನು ಹಿಡಿಯಲು ಹೋಗಿದ್ದ ಹಿನ್ನೆಲೆ ಗುತ್ತಿಗೆದಾರರ ಮೇಲೆ ದೂರು ದಾಖಲಾಗಿರುವ ಘಟನೆ, ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಸಮೀಪದ ಸೋಮನಹಳ್ಳಿಯ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಈ ನಡುವೆಯೂ ಜನರು ಬೇಜವಾಬ್ದಾರಿಯಿಂದ ಕೆರೆಯಲ್ಲಿ ಮೀನು ಹಿಡಿಯುವಂತಹ ಕೆಲಸ ಮಾಡಿದ್ದಾರೆ.
ಕೊರೊನಾ ನಿಯಮ ಉಲ್ಲಂಘಿಸಿ ಮೀನು ಹಿಡಿದ ಗ್ರಾಮಸ್ಥರು: ಗುತ್ತಿಗೆದಾರರ ವಿರುದ್ಧ ಪ್ರಕರಣ - ಕೊರೊನಾ ಲಾಕ್ಡೌನ್
ಮೀನುಗಾರಿಕೆ ಇಲಾಖೆಯಿಂದ ಮೀನು ಸಾಕಣೆಗೆ ರಾಮಣ್ಣ ಎಂಬುವರು ಗುತ್ತಿಗೆ ಪಡೆದಿದ್ದರು. ಮೀನು ಬೆಳವಣಿಗೆ ಆಗಿದ್ದರಿಂದ ಮಂಜಪ್ಪ ಎಂಬವರಿಗೆ ಮೊದಲ ಗುತ್ತಿಗೆದಾರ ಮರು ಗುತ್ತಿಗೆ ನೀಡಿದ್ದ. ಜೂನ್ 21ಕ್ಕೆ ಲಾಕ್ಡೌನ್ ಮುಗಿಯುತ್ತಿದ್ದಂತೆ ಜೂನ್ 22ಕ್ಕೆ ಮೀನು ಹಿಡಿಯಲು ಕರಪತ್ರದಲ್ಲಿ ಮುದ್ರಿಸಿ ಗ್ರಾಮದಲ್ಲಿ ಹಂಚಿಕೆ ಮಾಡಿದ್ದ. ಮೀನು ಹಿಡಿಯುವ ಒಬ್ಬರಿಗೆ ತಲಾ 200 ರೂ.ರಂತೆ ಹಣ ಕಟ್ಟಿ ಯಾರು ಬೇಕಾದರೂ ಮೀನು ಹಿಡಿಯುವ ಅವಕಾಶ ಕೊಟ್ಟಿದ್ದಾನೆ.

22ಕ್ಕೆ ಲಾಕ್ಡೌನ್ ಮುಗಿಯುತ್ತೆ ಎಂದು ಏಕಾಏಕಿ ನೂರಾರು ಮಂದಿ ಕೆರೆಗೆ ಇಳಿದು ಮೀನು ಹಿಡಿಯುವ ಮೂಲಕ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಸಂಬಂಧ ಮೂಲ ಗುತ್ತಿಗೆದಾರ ರಾಮಣ್ಣ ಹಾಗೂ ಮರು ಗುತ್ತಿಗೆ ಪಡೆದಿದ್ದ ಮಂಜಪ್ಪ ಎಂಬುವರ ವಿರುದ್ಧ ಈಗ ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ದೂರು ದಾಖಲಾಗಿದೆ.