ಹಾಸನ: ಅರಸೀಕೆರೆ ನಗರಸಭೆಯ ಆರು ಜನ ಬಂಡಾಯ ಸದಸ್ಯರು ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟಿದ್ದು, ತಮ್ಮ ಸ್ವಂತ ಅಭಿಪ್ರಾಯದಿಂದ ಜೆಡಿಎಸ್ ವಿರುದ್ಧ ಪ್ರತ್ಯೇಕ ಆಸನ ಕೇಳಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಸ್ವಪಕ್ಷ ಜೆಡಿಎಸ್ ವಿರುದ್ಧವೇ ಬಂಡಾಯವೆದ್ದು ಭಾರೀ ಸಂಚಲನ ಮೂಡಿಸಿದ್ದ ಪ್ರಕರಣವೀಗ ಹೊಸ ತಿರುವು ಪಡೆದಿದೆ.
7 ಸದಸ್ಯರ ಪೈಕಿ 2ನೇ ವಾರ್ಡ್ ಸದಸ್ಯೆ ಕಲೈ ಅರಸಿ ಬಂಡಾಯದಿಂದ ಹೊರಬಂದು, ಜೆಡಿಎಸ್ ನಾಯಕರ ಪರ ಸುದ್ದಿಗೋಷ್ಠಿ ನಡೆಸಿದ್ದರು. ಅಲ್ಲದೇ ‘ನಮಗೆ ಹಣದ ಆಮಿಷವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್, ಸಿಖಂದರ್ ಎಂಬುವರ ಕಡೆಯಿಂದ ನೀಡಿದ್ದರು. 25 ಲಕ್ಷ ರೂ. ಕೊಡುವುದಾಗಿ ಹೇಳಿ ಮುಂಗಡ 10 ಲಕ್ಷ ರೂ. ನಮ್ಮ ಮನೆಗೆ ತಲುಪಿಸಿದ್ರು’ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ಇದನ್ನೂಓದಿ: 25 ಲಕ್ಷ ಕೊಡ್ತೀವಿ, ಪಕ್ಷಕ್ಕೆ ಬನ್ನಿ ಅಂದ್ರು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್; ಕಲೈ ಅರಸಿ