ಕರ್ನಾಟಕ

karnataka

ETV Bharat / state

'ತರಕಾರಿ ವ್ಯಾಪಾರಸ್ಥರು ನಿಗದಿತ ಫ್ಲಾಟ್ ಫಾರ್ಮ್​ನ ಉಪಯೋಗ ಪಡೆಯಿರಿ' - ಕೃಷಿ ಉತ್ಮನ್ನ ಮಾರುಕಟ್ಟೆ

ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಕೃಷಿ ಮಾರುಕಟ್ಟೆಗಳು ಅತ್ಯವಶ್ಯಕವಾಗಿದ್ದು ತರಕಾರಿ ವ್ಯಾಪಾರಸ್ಥರು ನಿಗದಿತ ಫ್ಲಾಟ್ ಫಾರ್ಮ್​ನ ಉಪಯೋಗ ಪಡೆದುಕೊಳ್ಳುವಂತೆ ಶಾಸಕ ಡಾ.ಎ.ಟಿ. ರಾಮಸ್ವಾಮಿ ಮನವಿ ಮಾಡಿದರು.

arakalgudu
ಅರಕಲಗೂಡು

By

Published : Aug 23, 2020, 10:44 PM IST

ಅರಕಲಗೂಡು: ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಕೃಷಿ ಮಾರುಕಟ್ಟೆಗಳು ಅತ್ಯವಶ್ಯವಾಗಿದ್ದು ತರಕಾರಿ ವ್ಯಾಪಾರಸ್ಥರು ನಿಗದಿತ ಫ್ಲಾಟ್ ಫಾರ್ಮ್ ಅ​ನ್ನು ಉಪಯೋಗ ಪಡೆದುಕೊಳ್ಳುವಂತೆ ಶಾಸಕ ಡಾ. ಎ.ಟಿ. ರಾಮಸ್ವಾಮಿ ಮನವಿ ಮಾಡಿದರು.

ಬಸವೇಶ್ವರ ವೃತ್ತದಲ್ಲಿರುವ ಗ್ರಾಮ ಪಂಚಾಯಿತಿ ಆವರಣದಲ್ಲಿ ನಬಾರ್ಡ್‌ ಯೋಜನೆಯ ವತಿಯಿಂದ 75 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಮೂರು ಫ್ಲಾಟ್ ಫಾರ್ಮ್​ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಇಲ್ಲಿ ವ್ಯವಸ್ಥೆ ಮಾಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ಶಾಸಕ ಡಾ. ಎ.ಟಿ. ರಾಮಸ್ವಾಮಿ

ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷರಾದ ಸರಿತರಾಮು, ತಹಶೀಲ್ದಾರ್ ವೈ.ಎಂ. ರೇಣುಕುಮಾರ್, ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಾಜಶೇಖರ್, ನೀರಾವರಿ ಇಲಾಖೆ ಇಂಜಿನಿಯರ್ ಜಯರಾಂ, ಎಪಿಎಂಸಿ ಅಧಿಕಾರಿ ಸೋಮಶೇಖರ್, ಉಪತಹಶೀಲ್ದಾರ್ ಜಿ.ಸಿ. ಚಂದ್ರು ಮುಂತಾದವರು ಭಾಗವಹಿಸಿದ್ದರು.

ABOUT THE AUTHOR

...view details