ಕರ್ನಾಟಕ

karnataka

ETV Bharat / state

ಹೋರಾಟ ಮಾಡಿ ಜೈಲಿಗೆ ಹೋಗುತ್ತೇವೆ, ನಿಮ್ಮಂತೆ ಅಲ್ಲ: ಸಿಎಂ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ - ಹೋರಾಟ ಮಾಡಿ ಜೈಲಿಗೆ ಹೋಗುತ್ತೇವೆ

ಡಿ.5 ರಂದು ಬೆಳಗ್ಗೆಯಿಂದ ಸಂಜೆ ತನಕ ಕರ್ನಾಟಕ ಬಂದ್ ನಡೆಯುತ್ತೆ. ಇದು ಯಡಿಯೂರಪ್ಪ ಮತ್ತು ಕನ್ನಡಿಗರ ವಿರುದ್ಧ ನಡೆಯುವ ಹೋರಾಟ. ಈ ಹೋರಾಟದಲ್ಲಿ ಏನಾಗುತ್ತೆ ನೋಡೇಬಿಡೋಣ ಎಂದು ವಾಟಾಳ್ ನಾಗರಾಜ್ ಸವಾಲು ಹಾಕಿದ್ದಾರೆ.

vatal nagaraj latest news
ಸಿಎಂ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ

By

Published : Dec 3, 2020, 1:54 AM IST

ಹಾಸನ: ಯಡಿಯೂರಪ್ಪನವರೇ, ನಾವು ನಿಮ್ಮ ರೀತಿ ಜೈಲಿಗೆ ಹೋಗೋದಿಲ್ಲ. ಹೋರಾಟ ಮಾಡಿ ಜೈಲಿಗೆ ಹೋಗ್ತಿವಿ. ಅಂತ ಕನ್ನಡಪರ ಹೋರಾಟ ಸಂಘಟನೆಗಳ ಅಧ್ಯಕ್ಷ ವಾಟಾಳ್ ನಾಗರಾಜ್, ಸಿಎಂ ಬಿಎಸ್​ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ತುಂಬಾ ಹಠಮಾರಿ. ಯಾರ ಮಾತನ್ನು ಕೇಳುವುದಿಲ್ಲ. ಮರಾಠ ಪ್ರಾಧಿಕಾರ ಸ್ಥಾಪನೆ ಮಾಡುವುದು ಬೇಡ. ಇದರಿಂದ ಕನ್ನಡ ನಾಡಿಗೆ ಮತ್ತು ಕರ್ನಾಟಕದ ಜನತೆಗೆ ಅನ್ಯಾಯ ಮಾಡಿದಂತಾಗುತ್ತೆ. ಪ್ರಾಧಿಕಾರ ರಚನೆಗೆ ಅಂಕಿತ ಹಾಕುವುದು ಬೇಡ ಅಂತ ಹೇಳಿದರೂ, ನಮ್ಮ ಮಾತಿಗೆ ಕಿವಿಗೊಡದೆ ಅದೇನಾಗುತ್ತೊ ಆಗಲಿ ನೋಡಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಸಿಎಂ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ

ಯಡಿಯೂರಪ್ಪನವರೇ, ನಾವು ಹೋರಾಟದಲ್ಲಿ ಜೈಲಿಗೆ ಹೋಗುತ್ತಿದ್ದೇವೆ. ನಿಮ್ಮ ಹಾಗೆ ನಾವು ಜೈಲಿಗೆ ಹೋಗುವುದಿಲ್ಲ. ನೀವು ಜೈಲಿಗೆ ಹೋಗಿ ಬಂದರು ಒಂದಿಷ್ಟೂ ಬುದ್ಧಿ ಬಂದಿಲ್ಲ. ನೀವೂ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದೀರಿ, ಎಲ್ಲವನ್ನೂ ಯೋಚಿಸಿ ನಿರ್ಧಾರ ಮಾಡಬೇಕು. ಜನರ ಜೊತೆ ಬೆರೆತು ಅವರನ್ನು ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ನಂತರ ನಿರ್ಧಾರ ಕೈಗೊಳ್ಳಬೇಕು. ನೀವು ಇದ್ಯಾವುದನ್ನೂ ಮಾಡುತ್ತಿಲ್ಲ. ಡಿ.5 ರಂದು ಬೆಳಗ್ಗೆಯಿಂದ ಸಂಜೆ ತನಕ ಕರ್ನಾಟಕ ಬಂದ್ ನಡೆಯುತ್ತೆ. ಇದು ಯಡಿಯೂರಪ್ಪ ಮತ್ತು ಕನ್ನಡಿಗರ ವಿರುದ್ಧ ನಡೆಯುವ ಹೋರಾಟ. ಈ ಹೋರಾಟದಲ್ಲಿ ಏನಾಗುತ್ತೆ ನೋಡೇಬಿಡೋಣ ಎಂದು ಸವಾಲು ಹಾಕಿದ್ದಾರೆ.

ABOUT THE AUTHOR

...view details