ಹಾಸನ : ನಾಳೆ ರಾಜ್ಯಾದ್ಯಂತ ಕರೆಕೊಟ್ಟಿರುವ ಕರ್ನಾಟಕ ಬಂದ್ ಬೆಂಬಲಿಸಿ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಅವರು ನಗರದ ಎನ್ ಆರ್ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿದರು.
ಕರ್ನಾಟಕ ಬಂದ್ ಬೆಂಬಲಿಸುವಂತೆ ಹಾಸನದಲ್ಲಿ ವಾಟಾಳ್ ನಾಗರಾಜ್ ಸಾಂಕೇತಿಕ ಪ್ರತಿಭಟನೆ - ಹಾಸನ ಸುದ್ದಿ
ಶಾಲಾ-ಕಾಲೇಜು ಅಂಗಡಿ-ಮುಂಗಟ್ಟು ಹೋಟೆಲ್ ಸೇರಿ ಮಾರುಕಟ್ಟೆಗಳು ಬಂದಾಗಲಿವೆ. ಸಾರ್ವಜನಿಕರು ರೈತ ವಿರೋಧಿ ಕಾಯ್ದೆಗಳನ್ನು ತಂದಿರುವ ಸರ್ಕಾರದ ವಿರುದ್ಧ ನಾಳೆ ನಡೆಯುವ ಕರ್ನಾಟಕ ಬಂದ್ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ..
ಸಾಂಕೇತಿಕ ಪ್ರತಿಭಟನೆ
ಕೇಂದ್ರ ಮತ್ತು ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ಹಿನ್ನೆಲೆ ಇವುಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆ ಮಾಡಿದರು.
ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ ಅವರು, ನಾಳೆ ರಾಜ್ಯಾದ್ಯಂತ ಶಾಲಾ-ಕಾಲೇಜು ಅಂಗಡಿ-ಮುಂಗಟ್ಟು ಹೋಟೆಲ್ ಸೇರಿ ಮಾರುಕಟ್ಟೆಗಳು ಬಂದಾಗಲಿವೆ. ಸಾರ್ವಜನಿಕರು ರೈತ ವಿರೋಧಿ ಕಾಯ್ದೆಗಳನ್ನು ತಂದಿರುವ ಸರ್ಕಾರದ ವಿರುದ್ಧ ನಾಳೆ ನಡೆಯುವ ಕರ್ನಾಟಕ ಬಂದ್ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.