ಕರ್ನಾಟಕ

karnataka

ETV Bharat / state

ಕರ್ನಾಟಕ ಬಂದ್​ಗೆ ಹಾಸನ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಬೆಂಬಲ - ಕರ್ನಾಟಕ ರಕ್ಷಣಾ ವೇದಿಕೆಯಿಂದಲೂ ಬೆಂಬಲ

ನಾಳೆ ನಡೆಯುವ ಕರ್ನಾಟಕ ಬಂದ್​ಗೆ ಹಾಸನದ ಕನ್ನಡಪರ ಸಂಘಟನೆಗಳು ಹಾಗೂ ಜಿಲ್ಲೆಯಲ್ಲಿರುವ 70 ಸಂಘಗಳು ಬೆಂಬಲ ಸೂಚಿಸಿರುವುದರಿಂದ ನಾಳೆ ಜಿಲ್ಲೆ ಸಂಪೂರ್ಣ ಬಂದ್ ಆಗುವ ವಾತಾವರಣ ಕಾಣುತ್ತಿದೆ.

karnataka bandh support from hasana various organizations
ಕರ್ನಾಟಕ ಬಂದ್​​

By

Published : Dec 4, 2020, 6:55 PM IST

ಹಾಸನ: ಮರಾಠ ಅಭಿವೃದ್ಧಿ ನಿಗಮ ರಚನೆ ಖಂಡಿಸಿ ನಾಳೆ ಕರ್ನಾಟಕ ಬಂದ್​​ಗೆ ಕರೆ ಕೊಟ್ಟಿರುವ ಕನ್ನಡಪರ ಸಂಘಟನೆಗಳು ಹಾಸನದಲ್ಲಿಯೂ ಬಂದ್ ಯಶಸ್ವಿ ಮಾಡಲು ಸಜ್ಜಾಗುತ್ತಿವೆ. ಈಗಾಗಲೇ ರಾಜ್ಯದ ಕನ್ನಡಪರ ಸಂಘಟನೆಗಳ ನಾಯಕರು ಚರ್ಚೆ ಮಾಡಿದ್ದು, ನಾಳೆ ಸಂಪೂರ್ಣ ಬಂದ್ ಯಶಸ್ವಿಯಾಗುವ ಲಕ್ಷಣಗಳು ಕಾಣುತ್ತಿವೆ.

ಕರ್ನಾಟಕ ಬಂದ್

ಕರ್ನಾಟಕ ಬಂದ್​​ಗೆ ಹಾಸನದ ಕನ್ನಡಪರ ಸಂಘಟನೆಗಳು ಹಾಗೂ ಜಿಲ್ಲೆಯಲ್ಲಿರುವ 70 ಸಂಘಗಳು ಬೆಂಬಲ ಸೂಚಿಸಿರುವುದರಿಂದ ನಾಳೆ ಜಿಲ್ಲೆ ಸಂಪೂರ್ಣ ಬಂದ್ ಆಗುವ ವಾತಾವರಣ ಕಾಣುತ್ತಿದೆ. ಇನ್ನು ಹಿಂದೂ ಸಂಘಟನೆ, ಆಟೋ, ಹೋಟೆಲ್ ಮಾಲೀಕರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ ಸೇರಿದಂತೆ ಹಲವು ಸಂಘಟನೆಗಳು ಸಹಕಾರ ನೀಡಿವೆ.

ಹಾಗಾಗಿ ನಾಳೆ ಜಿಲ್ಲೆ ಸಂಪೂರ್ಣ ಬಂದ್ ಆಗಲಿದ್ದು, ನಾವು ಹೋರಾಟ ಮಾತ್ರ ಮಾಡಲು ಬರುತ್ತಿಲ್ಲ. ಕನ್ನಡ ಉಳಿವಿಗಾಗಿ ಜೈಲಿಗೂ ಹೋಗಲು ರೆಡಿಯಾಗಿ ಬರುತ್ತಿದ್ದೇವೆ ಎನ್ನುವುದು ಡಾ. ರಾಜ್​​​ಕುಮಾರ್ ಸಂಘಟನೆ ಮತ್ತು ಕನ್ನಡಪರ ಸಂಘಟನೆಯ ಜಿಲ್ಲಾಧ್ಯಕ್ಷರ ಮಾತಾಗಿದೆ.

ಓದಿ:ಜೆಡಿಎಸ್ ಶಾಸಕ ಜಿ ಟಿ ದೇವೇಗೌಡರ ಮನೆಗೆ ನಿಖಿಲ್ ಕುಮಾರಸ್ವಾಮಿ ದಂಪತಿ ಭೇಟಿ!

ಇನ್ನು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕನ್ನಡ ಭಾಷೆ, ನೆಲೆ, ಜಲದ ವಿಚಾರ ಬಂದಾಗ ನಮ್ಮ ಅಧಿಕಾರದ ಅವಧಿಯಲ್ಲಿ ಸಹಕಾರ ಮಾಡಿದ್ದೇವೆ. ಕಾರಣ ಹಿಂದೆ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗ ರಚನೆ ಮಾಡಿ 30% ಸಂಬಳವನ್ನ ಕೊಡಬೇಕೆಂದು ಆಗ್ರಹ ಮಾಡುವ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಸರ್ಕಾರಿ ನೌಕರರ ಪರವಾಗಿ ಬಂದು ಧ್ವನಿ ಎತ್ತಿದ್ದರು. ಹಾಗಾಗಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಿಗರ ಉಳಿವಿಗಾಗಿ ಹೋರಾಟ ಮಾಡಲು ಮುಂದಾಗಿರುವುದರಿಂದ, ಈಗಿನ ಸರ್ಕಾರಿ ನೌಕರರು ವಾಟಾಳ್ ಕೈ ಬಲಪಡಿಸಬೇಕು.

ನೆಲ, ಜಲ, ಭಾಷೆಯ ವಿಚಾರ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆಯಿಂದಲೂ ಬೆಂಬಲ ಸೂಚಿಸಿದ್ದೇವೆ. ಇಂದು ಕನ್ನಡಪರ ಸಂಘಟನೆಗಳಾದ ನಾವುಗಳು ನಾಳೆಯ ಬಂದ್​​ ಕರೆಗೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಆದರೆ ಜಾತಿ-ಜಾತಿಗಳ ನಡುವೆ ಸಂಘರ್ಷ ತಂದಿಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಮರಾಠಿಗರು ನಿಗಮ ರಚನೆ ಮಾಡಿ ಎಂದು ಕೇಳದಿದ್ದರೂ ಚುನಾವಣೆಗಾಗಿ ಪ್ರತ್ಯೇಕ ನಿಗಮ ಮಾಡಿರೋದು ಸರಿಯಲ್ಲ.

ದಯಮಾಡಿ ನಿಗಮವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ನಾಳೆ ಹಾಸನದಲ್ಲಿರುವ ಸುಮಾರು 70ಕ್ಕೂ ಹೆಚ್ಚು ಸಂಘಟನೆಗಳು ಬಂದ್ ವೇಳೆ ಸಹಕಾರ ನೀಡಲಿದ್ದು, ಹಾಸನ ಸಂಪೂರ್ಣ ಸ್ತಬ್ಧವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ಕರವೇ ಸಂಘಟನೆಯವರು.

ABOUT THE AUTHOR

...view details