ಕರ್ನಾಟಕ

karnataka

ETV Bharat / state

ವಾಜಪೇಯಿ ಪ್ರತಿಪಕ್ಷದವರೂ ಹೊಗಳುವಂತಹ ಅಜಾತ ಶತ್ರು: ಶೋಭಾ ಕರಂದ್ಲಾಜೆ - Vajpayee birthday celebration

'ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರು, ಎಲ್ಲರನ್ನೂ ಪ್ರೀತಿಸುತ್ತಿದ್ದರು. ಇತರ ಪಕ್ಷದವರು ವಾಜಪೇಯಿ ಅವರಿಗೆ ಗೌರವ ನೀಡುವ ಜೊತೆಗೆ ಅವರ ಕೆಲಸಗಳನ್ನು ಹೊಗಳುತ್ತಿದ್ದರು'.

ವಾಜಪೇಯಿ ಅವರ ಜನ್ಮದಿನಾಚರಣೆ
ವಾಜಪೇಯಿ ಅವರ ಜನ್ಮದಿನಾಚರಣೆ

By

Published : Dec 25, 2020, 4:43 PM IST

ಹಾಸನ:ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರತಿಪಕ್ಷದವರೂ ಹೊಗಳುವಂತಹ ಅಜಾತ ಶತ್ರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹಾಸನದಲ್ಲಿ ಹೇಳಿದ್ದಾರೆ.

ಕೆಐಎಡಿಬಿ ಬಳಿಯ ಖಾಸಗಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಾಜಪೇಯಿ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಕೃಷಿ ಮಸೂದೆ ಬಗ್ಗೆ ಇಂದು ಹೋರಾಟ ನಡೆಯುತ್ತಿದೆ. ಕಳೆದ 20 ವರ್ಷಗಳಿಂದ ಈ ಮಸೂದೆ ಮಂಡಿಸಲು ಪ್ರಯತ್ನ ನಡೆದಿದ್ದರೂ ಅದು ಸಾಧ್ಯವಾಗಿರಲಿಲ್ಲ. ಆದ್ರೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಿಲ್ ಪಾಸ್ ಮಾಡೋದರಲ್ಲಿ ಯಶಸ್ವಿಯಾಯ್ತು ಎಂದರು.

ವಾಜಪೇಯಿ ಜನ್ಮದಿನಾಚರಣೆ ವೇಳೆ ಶೋಭಾ ಕರಂದ್ಲಾಜೆ ಮಾತನಾಡಿದರು.

ಕಾಂಗ್ರೆಸ್ ಪಕ್ಷ 2013 ಹಾಗು 19ರ ಲೋಕಸಭಾ ಚುನಾವಣೆಯಲ್ಲಿ ಈ ಬಿಲ್ ಮಂಡಿಸುವ ಪ್ರಸ್ತಾಪ ಮಾಡಿತ್ತು. ದಲ್ಲಾಳಿಗಳ ಹಾವಳಿ ತಡೆಯುವುದಾಗಿ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಓದಿ:ಅಟಲ್ ನಗರ ನಾಮಕರಣ : ಕಾಂಗ್ರೆಸ್ ಆರೋಪ ಸರಿಯಲ್ಲ ಎಂದ ಸಚಿವ ಜೋಶಿ

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವೂ ಕೂಡಾ ಎಪಿಎಂಸಿ ಕಾಯ್ದೆ ರದ್ದು ಮಾಡೋದಾಗಿ ಹೇಳಿತ್ತು. ಹಾಗಾಗಿ, ರೈತರ ಪ್ರತಿಭಟನೆಯಲ್ಲಿ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ. ಕಮ್ಯುನಿಸ್ಟರು ಈ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ಆದ್ರೆ ಅವರು ಆಡಳಿತ ಮಾಡೋ ರಾಜ್ಯದಲ್ಲಿ ಎಪಿಎಂಸಿ ಇಲ್ಲ. ಇವರದ್ದು ಡೋಂಗಿತನದ ಪ್ರದರ್ಶನ ಎಂದು ಅವರು ಟೀಕಿಸಿದರು.

ABOUT THE AUTHOR

...view details