ಹಾಸನ:ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ ಮೊದಲನೇ ವರ್ಷದ ಪುಣ್ಯ ತಿಥಿಯ ಅಂಗವಾಗಿ ರಿಂಗ್ ರಸ್ತೆ ಬಳಿಯಿರುವ ಬ್ರಿಲಿಯೆಂಟ್ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ಕಂಚಿನ ಪ್ರತಿಮೆಯನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅನಾವರಣಗೊಳಿಸಿದರು.
ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ ಕಂಚಿನ ಪ್ರತಿಮೆ ಅನಾವರಣ - bronze statue of former MLA HS Prakash
ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ ಮೊದಲನೇ ವರ್ಷದ ಪುಣ್ಯ ತಿಥಿಯ ಅಂಗವಾಗಿ ರಿಂಗ್ ರಸ್ತೆ ಬಳಿಯಿರುವ ಬ್ರಿಲಿಯೆಂಟ್ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ಕಂಚಿನ ಪ್ರತಿಮೆಯನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅನಾವರಣಗೊಳಿಸಿದರು.

ಸಣ್ಣಯ್ಯ ಹಾಗೂ ರಂಗಮ್ಮ ದಂಪತಿ ಪುತ್ರರಾಗಿ 1951ರ ಸೆಪ್ಟೆಂಬರ್ 13ರಂದು ಹೆಚ್.ಎಸ್. ಪ್ರಕಾಶ್ ಹಾಸನದಲ್ಲಿ ಜನಿಸಿದ್ದರು.1994ರಿಂದ 2013ರವರೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತವಾಗಿ 4 ಬಾರಿ ಚುನಾಯಿತರಾಗಿದ್ದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಪ್ರಕಾಶ್ ಪರಾಭವಗೊಂಡಿದ್ದರು. 1983ರಲ್ಲಿ ಹಾಸನ ನಗರಸಭಾ ಸದಸ್ಯರಾಗಿ, 1985-87ರಲ್ಲಿ ಹಾಸನ ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪುಸ್ತಕ ಓದುವ, ಸಂಗೀತ ಕೇಳುವ ಹವ್ಯಾಸ ಹೊಂದಿದ್ದ ಇವರು, ಕೃಷಿಕರು ಕೂಡ ಆಗಿದ್ದರು. 4 ಬಾರಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದ ಅವರು, ಜನಪ್ರಿಯ ಶಾಸಕರಾಗಿದ್ದರು. ಪತ್ನಿ ಲಲಿತಾ ಪ್ರಕಾಶ್, ಕಂದಲಿ ಕ್ಷೇತ್ರದ ಜಿಪಂ ಸದಸ್ಯ ಹೆಚ್.ಪಿ.ಸ್ವರೂಪ್ ಸೇರಿ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಸ್. ಅನಿಲ್‌ಕುಮಾರ್, ವಾಸ್ತುಶಿಲ್ಪಿ ಹೆಚ್.ಎಸ್.ದೇವೇಂದ್ರ ಇವರ ಸಹೋದರರು.
2001ರಿಂದ ನಗರದ ಸಂಜೀವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. 2014ರಲ್ಲಿ ಬಿಜೆಪಿಯ ಪ್ರೀತಂಗೌಡರ ಎದುರು ಪರಾಭವಗೊಂಡಿದ್ದರು. ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ಇದೀಗ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.