ಕರ್ನಾಟಕ

karnataka

ETV Bharat / state

ವಾಮಾಚಾರಕ್ಕೆ ಹೂತಿಟ್ಟ ಶವ ಹೊತ್ತೊಯ್ದ ದುಷ್ಕರ್ಮಿಗಳು : ಕುಟುಂಬದಿಂದ ಆರೋಪ

ಕಳೆದೆರಡು ದಿನಗಳ ಹಿಂದೆ ಅಂತ್ಯಸಂಸ್ಕಾರ ಮಾಡಿದ್ದ ಲಕ್ಷ್ಮಮ್ಮನ ಶವವನ್ನು ಕೆಲವು ದುಷ್ಕರ್ಮಿಗಳು ಹೊರತೆಗೆದು ವಾಮಾಚಾರಕ್ಕಾಗಿ ಬಳಸಿದ್ದಾರೆ. ಮುರುಂಡಿ ತಾಂಡ್ಯದ ಪಾಲಾಕ್ಷ, ಹಿತೇಶ್, ಡಾಕ್ಯಾ ನಾಯಕ್ ಸೇರಿದಂತೆ ಹಲವರು ಈ ಕೃತ್ಯ ಮಾಡಿದ್ದಾರೆ ಎಂದು ಲಕ್ಷ್ಮಮ್ಮನ ಕುಟುಂಬ ಗಂಭೀರ ಆರೋಪ ಮಾಡಿದೆ..

Unknown persons taken away buried corpse for black magic
ವಾಮಾಚಾರಕ್ಕೆ ಹೂತಿಟ್ಟ ಶವ ಹೊತ್ತೊಯ್ದ ದುಷ್ಕರ್ಮಿಗಳು

By

Published : Sep 24, 2021, 9:18 PM IST

ಹಾಸನ/ಅರಸೀಕೆರೆ :ವಾಮಾಚಾರಕ್ಕಾಗಿ ಹೂತಿಟ್ಟ ಶವವನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಅರಸೀಕೆರೆಯಲ್ಲಿ ಕೇಳಿ ಬಂದಿದೆ.

ಕುಟುಂಬದಿಂದ ಆರೋಪ

ಅರಸೀಕೆರೆ ತಾಲೂಕಿನ ಯಾದಾಪುರದ ನಿವಾಸಿ ಮಂಜುನಾಥ್ ಕೆಲಸದ ನಿಮಿತ್ತ ತಿಪಟೂರಿನಲ್ಲಿ ನೆಲೆಸಿದ್ದರು. ಮಗನ ಜೊತೆಯಲ್ಲಿ ಕಳೆದೊಂದು ವರ್ಷದಿಂದ ತಾಯಿ ಲಕ್ಷ್ಮಮ್ಮ ವಾಸವಾಗಿದ್ದರು.

ಆದರೆ, ವಯೋಸಹಜ ಖಾಯಿಲೆಯಿಂದ ಲಕ್ಷ್ಮಮ್ಮ ಕಳೆದ ಮೂರು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದರು. ಕುಟುಂಬಸ್ಥರು ಅವರ ಅಂತ್ಯಸಂಸ್ಕಾರವನ್ನು ಸ್ವಗ್ರಾಮ ಯಾದಾಪುರದಲ್ಲಿ ಮಾಡಿದ್ದರು.

ಆದರೆ, ಕಳೆದೆರಡು ದಿನಗಳ ಹಿಂದೆ ಅಂತ್ಯಸಂಸ್ಕಾರ ಮಾಡಿದ್ದ ಲಕ್ಷ್ಮಮ್ಮನ ಶವವನ್ನು ಕೆಲವು ದುಷ್ಕರ್ಮಿಗಳು ಹೊರತೆಗೆದು ವಾಮಾಚಾರಕ್ಕಾಗಿ ಬಳಸಿದ್ದಾರೆ. ಮುರುಂಡಿ ತಾಂಡ್ಯದ ಪಾಲಾಕ್ಷ, ಹಿತೇಶ್, ಡಾಕ್ಯಾ ನಾಯಕ್ ಸೇರಿದಂತೆ ಹಲವರು ಈ ಕೃತ್ಯ ಮಾಡಿದ್ದಾರೆ ಎಂದು ಲಕ್ಷ್ಮಮ್ಮನ ಕುಟುಂಬ ಗಂಭೀರ ಆರೋಪ ಮಾಡಿದೆ.

ಈ ಸಂಬಂಧ ಕುಟುಂಬ ಶವವನ್ನು ಪತ್ತೆ ಮಾಡಿಕೊಡುವಂತೆ ಕೋರಿ ಅರಸೀಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಅ.1 ರಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ: Conditions Apply!

ABOUT THE AUTHOR

...view details