ಕರ್ನಾಟಕ

karnataka

ETV Bharat / state

ಜಾನುವಾರುಗಳಿಗೆ ನೀರು ಕುಡಿಸಲು ಹೋಗಿ ಕೆರೆಗೆ ಬಿದ್ದ ಬಾಲಕ: ರಕ್ಷಣೆಗೆ ಹೋದ ಯುವಕನೂ ನೀರುಪಾಲು - while Go for cattle watering

ಜಾನುವಾರುಗಳಿಗೆ ನೀರು ಕುಡಿಸಲು ಕೆರೆಯ ಸಮೀಪ ಹೋದಾಗ ಕಾಲುಜಾರಿ ಬಿದ್ದು ರಾಕೇಶ್ ನೀರುಪಾಲಾಗುತ್ತಿದ್ಗ. ಇದೇ ವೇಳೆ ಆತನನ್ನು ರಕ್ಷಣೆ ಮಾಡಲು ಮಲ್ಲೇಶ್ ಭೂವಿ ಮುಂದಾಗಿ ಆತ ಕೂಡ ನೀರು ಪಾಲಾಗಿದ್ದಾನೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿ ಹಟ್ಟಿ ಗ್ರಾಮ
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿ ಹಟ್ಟಿ ಗ್ರಾಮ

By

Published : Apr 30, 2022, 8:25 PM IST

ಹಾಸನ:ಜಾನುವಾರುಗಳಿಗೆ ನೀರು ಕುಡಿಸಲು ಹೋಗಿ ಇಬ್ಬರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿ ಹಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ. ರಾಕೇಶ್ (16) ಮತ್ತು ಮಲ್ಲೇಶ್ ಭೂವಿ (24) ಎಂಬುವವರೇ ಮೃತರು.

ಕಾಳೇನಹಳ್ಳಿ ಹಟ್ಟಿ ಗ್ರಾಮದಲ್ಲಿ ಇಬ್ಬರು ಕೆರೆ ಪಾಲು

ಬೆಂಗಳೂರಿನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ರಾಕೇಶ್ ರಜೆಗಾಗಿ ಸ್ವಗ್ರಾಮಕ್ಕೆ ಬಂದಿದ್ದ. ಇಂದು ಜಾನುವಾರುಗಳಿಗೆ ನೀರು ಕುಡಿಸಲು ಕೆರೆಯ ಸಮೀಪ ಹೋದಾಗ ಕಾಲುಜಾರಿ ಬಿದ್ದು ನೀರುಪಾಲಾಗುತ್ತಿದ್ಗ. ಇದೇ ವೇಳೆ ಆತನನ್ನು ರಕ್ಷಣೆ ಮಾಡಲು ಮಲ್ಲೇಶ್ ಭೂವಿ ಮುಂದಾಗಿ ಆತ ಕೂಡ ನೀರು ಪಾಲಾಗಿದ್ದಾನೆ.

ಜಿಲ್ಲೆಯಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಉತ್ತಮ ಮಳೆಯಾಗುತ್ತಿದ್ದು, ಬರದನಾಡು ಅರಸೀಕೆರೆಯಲ್ಲಿ ಕೂಡ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಇದರಿಂದ ಜಾನುವಾರುಗಳಿಗೆ ನೀರು ಕುಡಿಸಲು ಮುಂದಾಗಿ ಕಾಲು ಜಾರಿ ಇಬ್ಬರು ಯುವಕರು ನೀರುಪಾಲಾಗಿದ್ದು, ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಶಾಸಕ ಕೆ.ಎಂ.ಶಿವಲಿಂಗೇಗೌಡ

ವಿಷಯ ತಿಳಿದು ಸ್ಥಳಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಅರಸೀಕೆರೆ ತಹಶೀಲ್ದಾರ್, ಸ್ಥಳೀಯ ಜನಪ್ರತಿನಿಧಿಗಳು ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೇ, ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ಕೂಡ ನೀಡಿದರು.

ಇದನ್ನೂ ಓದಿ:ತಾಪಿ ನದಿಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ

ABOUT THE AUTHOR

...view details