ಹಾಸನ :ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಆಲೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಬ್ಯಾಡರಹಳ್ಳಿ ಗ್ರಾಮದ ನಿವಾಸಿ ನಾಗರಾಜು ಎಂಬುವವರ ಮಗ ಪ್ರತಾಪ್ (30)ಹಾಗೂ ಕೃಷ್ಣೇಗೌಡ ಎಂಬುವವರ ಮಗ ಮಂಜುನಾಥ್ (31)ಮೃತಪಟ್ಟ ದುರ್ದೈವಿಗಳು. ಬುಧವಾರ ರಾತ್ರಿ 11 ಗಂಟೆಗೆ ಪ್ರತಾಪ್ ಹಾಗೂ ಮಂಜುನಾಥ್ ಕೆರೆಯಲ್ಲಿ ಮೀನು ಹಿಡಿಯಲು ವಾಹನದ ಟ್ಯೂಬ್ ಬಳಸಿ ಕೆರೆ ಮಧ್ಯ ಭಾಗಕ್ಕೆ ತೆರಳಿ ಬಲೆ ಬಿಡುವಾಗ ಆಯಾತಪ್ಪಿ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.