ಕರ್ನಾಟಕ

karnataka

ETV Bharat / state

'ರಸ್ತೆ, ಸೇತುವೆ ಮಾತ್ರವಲ್ಲ ಯುವಕರಿಗೆ ಮದುವೆಯೂ ಇಲ್ಲ': ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು - Karnataka assembly election

ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಬಾಚನಹಳ್ಳಿ ಹಾಗೂ ದೋನಹಳ್ಳಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

boycott the election
ಚುನಾವಣೆ ಬಹಿಷ್ಕಾರ

By

Published : Mar 29, 2023, 1:11 PM IST

ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಬಾಚನಹಳ್ಳಿ ಹಾಗೂ ದೋನಹಳ್ಳಿ ಗ್ರಾಮಸ್ಥರು

ಹಾಸನ : ರಸ್ತೆ, ಸೇತುವೆ ಸೇರಿದಂತೆ ಯಾವುದೇ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆಂದು ಆರೋಪಿಸಿ ಮತದಾನ ಬಹಿಷ್ಕಾರ ಮಾಡಲು ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿಯ ಬಾಚನಹಳ್ಳಿ ಹಾಗೂ ದೇವಾಲದಕೆರೆಯ ದೋನಹಳ್ಳಿ ಗ್ರಾಮಸ್ಥರು ಮುಂದಾಗಿದ್ದಾರೆ.

"ಹಾನುಬಾಳು ಹೋಬಳಿ ಕೇಂದ್ರದಿಂದ ಬಾಚನಹಳ್ಳಿ ಗ್ರಾಮ‌ ಕೇವಲ 5 ಕಿ.ಮೀ ದೂರದಲ್ಲಿದ್ದರೂ ಸಹ ಗ್ರಾಮಕ್ಕೆ ಸೂಕ್ತ ರಸ್ತೆ ಇಲ್ಲದೆ ಸ್ಥಳೀಯರು ಪರದಾಡುವಂತಾಗಿದೆ. ಈ ಕಾರಣದಿಂದಾಗಿಯೇ ಗ್ರಾಮದಲ್ಲಿ ನಡೆಯುವ ಶುಭ, ಅಶುಭ ಕಾರ್ಯಗಳಿಗೆ ಸಂಬಂಧಿಗಳು ಬರುವುದಿಲ್ಲ. ವಿದ್ಯಾರ್ಥಿಗಳು ಶಾಲೆಗೆ ಹೋಗಲು ಜೀಪುಗಳನ್ನು ಆಶ್ರಯಿಸಬೇಕಾಗಿದ್ದು, ಜೀಪುಗಳಿಲ್ಲದಿದ್ದರೆ ನಡೆದುಕೊಂಡೆ ಹೋಗಬೇಕು. ಅನಾರೋಗ್ಯದಿಂದ ಬಳಲುತ್ತಿರುವವರನ್ನು ಆಸ್ಪತ್ರೆಗೆ ಸಾಗಿಸಲು ಸಹ ಕಷ್ಟವಾಗುತ್ತಿದೆ. ಶಾಸಕರು, ಗ್ರಾಮ ಪಂಚಾಯತ್​ ಉಪಾಧ್ಯಕ್ಷರು, ಅಧ್ಯಕ್ಷರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ" ಎಂದು ಸ್ಥಳೀಯರಾದ ಯೋಗೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ :ಐದು ದಶಕ ಕಳೆದರೂ ನೆರೆ ನಿರಾಶ್ರಿತರಿಗೆ ಸಿಗದ ಸೌಲಭ್ಯ: ಮತದಾನ ಬಹಿಷ್ಕಾರದ ಎಚ್ಚರಿಕೆ

"ಮಳೆಗಾಲದಲ್ಲಿ ದೋನಹಳ್ಳಿ ಗ್ರಾಮಸ್ಥರ ಪಾಡು ಹೇಳಲು ಅಸಾಧ್ಯವಾಗಿದೆ. ಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸುಮಾರು 500 ಕ್ಕೂ ಹೆಚ್ಚು ಮಂದಿ ಈ ಎರಡು ಗ್ರಾಮಗಳಲ್ಲಿ ನೆಲೆಸಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ದಿನನಿತ್ಯ ಹಿಡಿಶಾಪ ಹಾಕುವಂತಾಗಿದೆ. 2005 ರಲ್ಲಿ ಜಲ್ಲಿ ಹಾಕಿರುವುದನ್ನು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಮಕ್ಕಳು ಪ್ರತಿನಿತ್ಯ 5 ರಿಂದ 6 ಕಿಲೋ ಮೀಟರ್​ ನಡೆದುಕೊಂಡು ಹೋಗಬೇಕು. ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಹಲವು ಬಾರಿ ಮನವಿ ಮಾಡಿದಾಗ ಕೇವಲ ಆಶ್ವಾಸನೆ ನೀಡಿದ್ದಾರೆ. ಕುಡಿಯುವ ನೀರು, ಮನೆ ಸೇರಿದಂತೆ ಮೂಲಭೂತ ಸೌಕರ್ಯ ಗಳಿಂದ ವಂಚಿತರಾಗಿದ್ದೇವೆ. ರಸ್ತೆ ಅವ್ಯವಸ್ಥೆಯಿಂದಾಗಿ ಈ ಎರಡು ಗ್ರಾಮಗಳ ಯುವಕರಿಗೆ ಹೆಣ್ಣು ಮಕ್ಕಳನ್ನು ಕೊಡಲು ಪೋಷಕರು ಮುಂದಾಗದ ಕಾರಣ ಅನೇಕ ಯುವಕರು ಇನ್ನೂ ಅವಿವಾಹಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಹಾಗಾಗಿ, ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕಾರ ಮಾಡಲು ಮುಂದಾಗಿದ್ದೇವೆ" ಅಂತಾ ಮತ್ತೋರ್ವ ಸ್ಥಳೀಯ ನಿವಾಸಿ ಪರಮೇಶ್ ಮಾಹಿತಿ ನೀಡಿದರು.

ಇದನ್ನೂ ಓದಿ :ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಬಹಿಷ್ಕಾರದ ಕೂಗು..ಬ್ಯಾನರ್​ ಅಳವಡಿಕೆ

"ನಾವು ಪ್ರತಿದಿನ ಶಾಲೆಗೆ ಹೋಗುವುದಕ್ಕೆ ಕಷ್ಟವಾಗುತ್ತಿದೆ. ಕೆಲವೊಮ್ಮೆ ತರಗತಿಗಳು ಸಹ ಮಿಸ್​ ಆಗಿವೆ. ಮಳೆಗಾಲದಲ್ಲಿ ಎಲ್ಲಿ ಮರಗಳು ಬೀಳುತ್ತೋ ಎಂಬ ಭಯದಲ್ಲೇ ಹೋಗುತ್ತೇವೆ. ಮತ್ತೆ ಪ್ರಾಣಿಗಳ ಕಾಟ ಸಹ ಇದೆ. ಬೆಳಗ್ಗೆ 7 ಗಂಟೆಗೆ ಶಾಲೆಗೆ ಹೊರಟರೆ ಸಂಜೆ ಮನೆಗೆ ಬರೋದು 6 ಗಂಟೆ ಆಗುತ್ತದೆ. ನಮಗೆ ಓದಲು, ಆಟವಾಡಲು ಸಮಯ ಸಿಗುತ್ತಿಲ್ಲ. ಕೆಲವೊಮ್ಮೆ ಕರೆಂಟ್​ ಸಮಸ್ಯೆ ಉಂಟಾಗುತ್ತಿರುತ್ತದೆ" ಎಂದು ವಿದ್ಯಾರ್ಥಿನಿ ಸಿಂಧು ಸಮಸ್ಯೆ ತೋಡಿಕೊಂಡರು.

ಇದನ್ನೂ ಓದಿ :ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ: ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

ABOUT THE AUTHOR

...view details