ಕರ್ನಾಟಕ

karnataka

ETV Bharat / state

ರಸ್ತೆ ಬದಿ ಅಂಗಡಿಗೆ ಡಿಕ್ಕಿ ಹೊಡೆದ ಕ್ಯಾಂಟರ್​: ಇಬ್ಬರು ಪ್ರಾಣಾಪಾಯದಿಂದ ಪಾರು - ಸಕಲೇಶಪುರದ ರಸ್ತೆ ಬದಿಯಿದ್ದ ಎರಡು ಪೆಟ್ಟಿಗೆ ಅಂಗಡಿಗೆ ನುಗ್ಗಿದ ಕ್ಯಾಂಟರ್

ಚಾಲಕನ ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆಗೆ ಸಕಲೇಶಪುರದ ರಸ್ತೆ ಬದಿಯಿದ್ದ ಎರಡು ಪೆಟ್ಟಿಗೆ ಅಂಗಡಿಗೆ ಕ್ಯಾಂಟರ್​ ನುಗ್ಗಿ ಅಂಗಡಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ.

accident
accident

By

Published : May 27, 2021, 8:42 AM IST

ಸಕಲೇಶಪುರ(ಹಾಸನ):ಕ್ಯಾಂಟರ್ ಲಾರಿಯೊಂದು ಚಾಲಕನ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದ ಪರಿಣಾಮ ಎರಡು ಪೆಟ್ಟಿಗೆ ಅಂಗಡಿಗಳು ಧ್ವಂಸವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ರಸ್ತೆ ಬದಿ ಅಂಗಡಿಗೆ ಡಿಕ್ಕಿ ಹೊಡೆದ ಕ್ಯಾಂಟರ್

ಪಟ್ಟಣದ ತೇಜಸ್ಚಿ ಚಿತ್ರಮಂದಿರದ ಸಮೀಪ ಮಂಗಳವಾರ ರಾತ್ರಿ 1.30ರ ಸಮಯದಲ್ಲಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕ್ಯಾಂಟರ್ ಲಾರಿಯೊಂದು ಚಾಲಕನ ನಿರ್ಲಕ್ಷ್ಯದಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಹೆದ್ದಾರಿ ಬದಿಯಲ್ಲಿದ್ದ ಎರಡು ಪೆಟ್ಟಿಗೆ ಅಂಗಡಿಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಜೊತೆಗೆ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದೆ.

ಇನ್ನು ಈ ಸಮಯದಲ್ಲಿ ಪೆಟ್ಟಿಗೆ ಅಂಗಡಿಯ ಒಳಭಾಗದಲ್ಲಿ ನಾಗರಾಜ್ ಹಾಗೂ ಅವರ ಪತ್ನಿ ಇದ್ದು, ಅದೃಷ್ಟವಷಾತ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಕ್ಯಾಂಟರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅಪಾಯದಿಂದ ಪಾರಾಗಿದ್ದಾನೆ. ಕ್ಯಾಂಟರ್ ಹೊಡೆದ ರಭಸಕ್ಕೆ ದೊಡ್ಡ ಶಬ್ದ ಕೇಳಿ ಬಂದಿದ್ದು, ತಕ್ಷಣ ಹೊರಗೆ ಬಂದು ನೋಡಿದಾಗ ಕ್ಯಾಂಟರ್ ವಿದ್ಯುತ್ ವೈರ್​ಗಳಿಗೆ ಸಿಲುಕಿತ್ತು. ವಿದ್ಯುತ್ ಕಂಬ ಬಿದ್ದಿದ್ದರಿಂದ ದಿನವಿಡೀ ಪಟ್ಟಣದ ಕೆಲವು ಬಡಾವಣೆಗಳಿಗೆ ವಿದ್ಯುತ್ ಪೂರೈಕೆ ಇರಲಿಲ್ಲ.

ತೇಜಸ್ವಿ ಚಿತ್ರಮಂದಿರ ಸಮೀಪ ರಾಷ್ಟ್ರೀಯ ಹೆದ್ದಾರಿ 75 ಹಾಗೂ ಸಕಲೇಶಪುರ-ಬೇಲೂರು ರಾಜ್ಯ ಹೆದ್ದಾರಿಯಿಂದ ಬರುವ ವಾಹನಗಳು ಒಂದೆಡೆಗೆ ಹೋಗಬೇಕಾಗಿದ್ದು, ಈ ವೃತ್ತವು ಸಂಪೂರ್ಣ ಕಿರಿದಾಗಿರುವುದರಿಂದ ಅಪಘಾತಗಳು ಸಾಮಾನ್ಯವಾಗಿವೆ. ಕೂಡಲೇ ಈ ವೃತ್ತವನ್ನು ಅಗಲೀಕರಿಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕಾಗಿದೆ. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details