ಹಾಸನ:ಜಿಲ್ಲೆಯ ಐಗೂರು ಗ್ರಾಮದ ಬಳಿ ಯುವಕನೋರ್ವ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದು, ಹಾಸನದ ಶ್ರೀನಗರ ಬಡಾವಣೆಯಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ಬೆಂಗಳೂರು ಮೂಲದ ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿದ್ದಾರೆ.
ಹಾಸನ: ಎರಡು ಪ್ರತ್ಯೇಕ ಘಟನೆಯಲ್ಲಿ ಮೂವರ ಧಾರುಣ ಸಾವು - ಐಗೂರು ಗ್ರಾಮದ ಬಳಿ ಸಾವು
ಹಾಸನ ಜಿಲ್ಲೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಧಾರುವಣವಾಗಿ ಸಾವನ್ನಪ್ಪಿದ್ದು, ಬೆಂಗಳೂರು ಮೂಲದ ಇಬ್ಬರು ನಗರದಲ್ಲಿ ರೈಲಿಗೆ ಸಿಕ್ಕಿ ಮೃತಪಟ್ಟಿದ್ದರೆ, ಐಗೂರು ಗ್ರಾಮದ ಯುವಕನೋರ್ವ ಕಾಲು ಜಾರಿ ನೀರಿಗೆ ಬಿದ್ದು ಸಾವಿಗೀಡಾಗಿದ್ದಾನೆ.
ಸಕಲೇಶಪುರ ತಾಲೂಕಿನ ಐಗೂರು ಗ್ರಾಮದ ನವೀನ್(25) ದನ-ಕರುಗಳನ್ನು ಜಮೀನಿನ ಬಳಿ ಕರೆದೊಯ್ಯುತ್ತಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾನೆ ಹಾಗೂ ಹಾಸನ ಪಟ್ಟಣಕ್ಕೆ ಬೆಂಗಳೂರಿನಿಂದ ಬಂದಿದ್ದ ಇಬ್ಬರು ಕೂಲಿ-ಕಾರ್ಮಿಕರು ಆಕಸ್ಮಿಕವಾಗಿ ಗೂಡ್ಸ್ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಐಗೂರು ಗ್ರಾಮದ ನವೀನ್ ಎಂಬಾತನ ಮೃತದೇಹವನ್ನು ಗ್ರಾಮಸ್ಥರ ಸಹಾಯದಿಂದ ನದಿಯಿಂದ ತೆಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಇನ್ನು ಹಾಸನ ನಗರದಲ್ಲಿ ರೈಲಿಗೆ ಸಿಕ್ಕಿ ಮೃತಪಟ್ಟವರ ದೇಹಗಳ ಪರಿಶೀಲನೆ ನಡೆಸಿದ ಪೊಲೀಸರು, ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಕಾರ್ಯಪೃವೃತ್ತರಾಗಿದ್ದಾರೆ.