ಹಾಸನ: ಕೆರೆಯಲ್ಲಿ ಈಜಲು ಹೋದ ಮಾನಸಿಕ ಅಸ್ವಸ್ಥ ಯುವಕ ಹಾಗೂ ಮದ್ಯ ವ್ಯಸನಿಯಾಗಿದ್ದ ಇನ್ನೊಬ್ಬ ವ್ಯಕ್ತಿ ಮೃತಪಟ್ಟ ಪ್ರತ್ಯೇಕ ಘಟನೆಗಳು ಜಿಲ್ಲೆಯಲ್ಲಿ ನಡೆದಿದೆ.
ಪ್ರತ್ಯೇಕ ಪ್ರಕರಣ: ಕೆರೆಗೆ ಬಿದ್ದು ಇಬ್ಬರು ಆತ್ಮಹತ್ಯೆ - ಹಾಸನದಲ್ಲಿ ಇಬ್ಬರು ಆತ್ಮಹತ್ಯೆ
ಹಾಸನ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕೆರೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆರೆಗೆ ಬಿದ್ದು ಇಬ್ಬರು ಆತ್ಮಹತ್ಯೆ
ತಾಲೂಕಿನ ಐದಳ್ಳ ತಾಂಡ್ಯದಲ್ಲಿ ಮಾನಸಿಕ ಅಸ್ವಸ್ಥ ಯುವಕ ನವೀನ್ ಕುಮಾರ್ (23) ಮೃತಪಟ್ಟಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಕಡೆ ನಗರ ಹೊರವಲಯದ ಕಸ್ತೂರವಳ್ಳಿ ಗೇಟ್ ಬಳಿಯ ಕೆರೆಗೆ ಬಿದ್ದು ಶಶಿಕುಮಾರ್ (36) ಮೃತಪಟ್ಟಿದ್ದು, ಈತನು ಮದ್ಯ ವ್ಯಸನಿಯಾಗಿದ್ದನು ಎನ್ನಲಾಗುತ್ತಿದೆ. ನಗರದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.